ಬಾಬ್ಬಿ ಜೊತೆಗಿನ ಕೃತಿಯ ಸಿನಿಮಾ ಶುರು

ಕನ್ನಡದ ನಟಿ ಕೃತಿ ಕರಬಂಧ ಈಗ ಬಾಲಿವುಡ್ಡಿನಲ್ಲೂ ಬಿಝಿಯಾಗುತ್ತಿದ್ದಾಳೆ. `ರಾಝ್ ರಿಬೋಟ್’ ಚಿತ್ರದ ಮೂಲಕ ಬಾಲಿವುಡ್ಡಿಗೆ ಪಾದಾರ್ಪಣೆ ಮಾಡಿದ್ದ ಕೃತಿ ಈಗ ಒಂದಾದರ ಮೇಲೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. `ಅತಿಥಿ ಇನ್ ಲಂಡನ್’, `ಶಾದೀ ಮೆ ಜರೂರ್ ಆನಾ’ ಚಿತ್ರಗಳ ನಂತರ ಕೃತಿಯೀಗ ಬಾಬ್ಬಿ ಡಿಯೋಲ್ ಜೊತೆ `ಯಮ್ಲಾ ಪಗ್ಲಾ ದಿವಾನಾ ಫಿರ್ ಸೆ’ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ.

ಧರ್ಮೇಂದ್ರ ಈ ಚಿತ್ರದಲ್ಲಿ ಪುತ್ರರಾದ ಸನ್ನಿ ಡಿಯೋಲ್ ಹಾಗೂ ಬಾಬ್ಬಿ ಡಿಯೋಲ್ ಜೊತೆ ನಟಿಸುತ್ತಿದ್ದು ಚಿತ್ರದಲ್ಲಿ ಬಾಬ್ಬಿ ನಾಯಕಿಯಾಗಿ ಕೃತಿ ಕರಬಂಧ ಅಭಿನಯಿಸುತ್ತಿದ್ದಾಳೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾಳೆ.