ನಾಡಿಗೆ ಬಂದ ಕಡವೆಯ ರಕ್ಷಣೆ

ಸಾಂದರ್ಭಿಕ ಚಿತ್ರ

ಕಾರವಾರ : ನಾಯಿಗಳ ದಾಳಿಯಿಂದ ಬೆದರಿ ನಗರದ ಲಂಡನ್ ಬ್ರೀಡ್ಜ್ ಸಮೀಪದ ಕಾಡಿನಿಂದ ನಾಡಿಗೆ ಬಂದ ಹೆಣ್ಣು ಕಡವೆಯೊಂದು ಸಮುದ್ರಕ್ಕೆ ಜಿಗಿದು ಪ್ರಾಣಾಪಾಯದಲ್ಲಿದ್ದ ಕಡವೆಯನ್ನು ಮೀನುಗಾರರು ಸೋಮವಾರ ರಕ್ಷಿಸಿದ್ದಾರೆ.ನಾಯಿಗಳ ದಾಳಿಗೆ ಹೆದರಿ ಸಮುದ್ರಕ್ಕೆ ಜಿಗಿದ ಕಡವೆ ನೀರಿನಲ್ಲಿ ಈಜಾಡಿ ಸುಸ್ತ್ತಾಗಿದೆ. ಪ್ರಾಣಾಪಾಯದಲ್ಲಿದ್ದ ಕಡವೆಯನ್ನು ಮೀನುಗಾರರು ದೋಣಿಯಲ್ಲಿ ತೆರಳಿ ಆಳ ಸಮುದ್ರಕ್ಕೆ ಕಡವೆ ಹೋಗದಂತೆ ತಡೆದರಲ್ಲದೇ, ದಂಡೆಗೆ ತಂದು ಕಡವೆಯನ್ನು ರಕ್ಷಿಸಿದರು. ಛಾಯಾಚಿತ್ರಗ್ರಾಹಕ ಪಾಂಡುರಂಗ ಹರಿಕಂತ್ರ ಅವರು ಕಡವೆ ರಕ್ಷಣೆಗಾಗಿ ಸಮುದ್ರಕ್ಕೆ ಜಿಗಿದರಲ್ಲದೇ, ಈಜಿ ಕಡವೆ ಆಳ ಸಮುದ್ರಕ್ಕೆ ಹೋಗದಂತೆ ತಡೆದರು. ಈ ಸಂದರ್ಭದಲ್ಲಿ ಕಡವೆಯ ಕಾಲು ತಗಲಿ, ಅವರ ತಲೆಗೆ ಸಣ್ಣ ಪೆಟ್ಟು ತಗಲಿದೆ. ತಕ್ಷಣ ಅವರನ್ನು ಸಿವಿಲ್ ಆಸ್ಪತ್ರೆಗೆ ಕಳುಹಿಸಿ, ಚಿಕಿತ್ಸೆ ಕೊಡಿಸಲಾಯಿತು.ಅರಣ್ಯಾಧಿಕಾರಿಗಳು ಸಹ ಸ್ಥಳಕ್ಕೆ ಧಾವಿಸಿ ಪಶು ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸಿದರು. ಕಾರವಾರ ಡಿ ಎಫ್ ಓ ಕಚೇರಿ ಬಳಿಯ ನರ್ಸರಿಗೆ ಕಡವೆಯನ್ನು ಕೊಂಡೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಅರಣ್ಯ ಪ್ರದೇಶಕ್ಕೆ ಕಡವೆಯನ್ನು ಬಿಡಲಾಯಿತು.