ಮಂಗಳೂರು ರೈಲು ಸ್ಟೇಶನ್ನಿನಲ್ಲಿ ಟಿಕೆಟ್ ವಿತರಕರು ಸಂಯಮ ಕಳೆದುಕೊಳ್ಳದಿರಲಿ

ಮಂಗಳೂರಿನಿಂದ ಪುತ್ತೂರು ಮಾರ್ಗವಾಗಿ ಬೆಂಗಳೂರು, ಯಶವಂತಪುರಕ್ಕೆ ಹೋಗುವ ನೂತನ ಕುಡ್ಲ ಎಕ್ಸ್‍ಪ್ರೆಸ್ ರೈಲಿಗೆ ಚಾಲನೆ ದೊರೆತಿದೆ. ಆದರೆ ಪ್ರಯಾಣಿಕರಿಗೆ ಅನುಕೂಲಕರವಾದ ಪರಿಸ್ಥಿತಿ ಇದರಲ್ಲಿ ಇದೆಯೇ ಎನ್ನುವುದನ್ನು ಸಂಬಂಧಪಟ್ಟವರು ಒಮ್ಮೆ ಪರಿಶೀಲನೆ ಮಾಡಬೇಕಾಗಿದೆ. ರೈಲು ನಿಗದಿತ ಸಮಯಕ್ಕಿಂತ ಸ್ವಲ್ಪ ಬೇಗ ಹೋಗುವುದು, ತಡವಾಗಿ ತಲುಪುವುದು, ನೀರಿನ ಕೊರತೆ, ಟಿಕೆಟ್ ಸಮಸ್ಯೆ ಮುಂತಾದ ಸಮಸ್ಯೆಗಳು ಇರುತ್ತವೆ. ಇಂತಹ ಸಮಸ್ಯೆಗಳು ಇವೆ. ನಿಗದಿತ ಸಮಯಕ್ಕಿಂತ ಮೊದಲು ಹೊರಟರೆ ಬಹಳಷ್ಟು ಪ್ರಯಾಣಿಕರಿಗೆ ತೊಂದರೆ ಆಗುತ್ತದೆ
ಟಿಕೆಟ್ ನೀಡುವಾಗಲೂ ಪ್ರಯಾಣಿಕರ ಜತೆ ಸಂಯಮದಿಂದ ಅಧಿಕಾರಿಗಳು ವರ್ತಿಸಬೇಕು. ಪ್ರಯಾಣಿಕರಿಗೆ ಒತ್ತಡ ಹಾಕುುವುದು, ಕಾಯುವಂತೆ ಮಾಡುವುದು ಬೇಡ. ಎಲ್ಲಾ ಕೆಲಸ ಶೀಘ್ರದಲ್ಲಿ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟು ಸುಗಮವಾಗಿ ಸಂಚರಿಸಲು ಅವಕಾಶ ನೀಡಲಿ

  • ನಿತೇಶ್ ಕುಮಾರ್  ಮಂಗಳೂರು