ಯುವಕಗೆ ಇರಿದ ಪ್ರಕರಣ ಮಾತುಕತೆಯಲ್ಲಿ ಇತ್ಯರ್ಥ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಯುವಕನಿಗೆ ಇರಿತ ಪ್ರಕರಣ ಕೊನೆಗೆ ಕೇಸಿಲ್ಲದೆ ರಾಜಿ ಪಂಚಾತಿಗೆಯಲ್ಲಿ ಇತ್ಯರ್ಥಗೊಂಡಿದೆ.
ಬಂದ್ಯೋದ್ ಮುಟ್ಟಂ ನಿವಾಸಿ ಜಿಷ್ಣು(28)ನನ್ನು ತಂಡವೊಂದು ಬುಧವಾರ ರಾತ್ರಿ ಶಿರಿಯ ಮುಟ್ಟಂ ರೈಲ್ವೇ ಮಾರ್ಗದಲ್ಲಿ ಇರಿದು ಗಂಭೀರ ಗಾಯಗೊಳಿಸಿ ಪರಾರಿಯಾಗಿತ್ತು.
ಜಿಷ್ಣುವನ್ನು ಕೂಡಲೇ ಊರವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇರಿತದಿಂದ ಪ್ರಾಣಾಪಾಯ ವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇರಿದ ತಂಡ ಜಿಷ್ಣುವಿನ ಸಂಬಂಧಿಕರನ್ನು ಭೇಟಿಯಾಗಿ ಕೇಸು ಇಲ್ಲದೆ ಮುಗಿಸುವಂತೆ ಬೇಡಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ಕೇಸಿಲ್ಲದೆ ಸುಖಾಂತ್ಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.