ಆತಂಕ ತಂದ ಎಸ್ಸೆಸ್ಸೆಲ್ಸಿ ಪರೀಕ್ಷೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಥಮ ದಿನವೇ 739 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು ತುಂಬಾ ಬೇಸರ ತರಿಸಿದೆ. ಇದರ ಮೂಲ ಕಾರಣ ಹುಡುಕುವ ಕೆಲಸ ಯಾರ ಹೊಣೆ  ವರ್ಷಪೂರ್ತಿ ವಿದ್ಯಾರ್ಥಿ ಶಾಲೆಗೆ ಬರುತ್ತಿರುವಾಗ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸರಿಯಾದ ಹಣ ಕೇಳುವ ವಿದ್ಯಾಸಂಸ್ಥೆಗಳು ವಿದ್ಯಾರ್ಥಿ ಪರೀಕ್ಷೆಗೆ ಗೈರಾದಾಗ ಏನು ಕ್ರಮ ಕೈಗೊಳ್ಳುತ್ತವೆ
ವಿದ್ಯೆ ಎಲ್ಲರ ಹಕ್ಕು. ಸರಕಾರ ಶಿಕ್ಷಣಕ್ಕಾಗಿ ಸಾಧ್ಯವಾದ ಎಲ್ಲ ಸವಲತ್ತುಗಳನ್ನು ನೀಡಿದೆ. ಇಲ್ಲಿ ಗೈರುಹಾಜರಾಗಲು ಆರೋಗ್ಯ ಸಮಸ್ಯೆಯೇ ಮುಖ್ಯ ಕಾರಣ ಅನ್ನಲಾಗುವುದಿಲ್ಲ
ಪ್ರಬುದ್ಧರಾದ ಬಾಲಕ ಬಾಲಕಿಯರನ್ನು ಪರೀಕ್ಷೆಗೆ ಸಂಬಂಧಿಸಿದ ಭಯ  ಒತ್ತಡ  ಹಿಂಜರಿಕೆಯಂತಹ ಛಾಯೆಯಿಂದ ಹೊರತರುವುದು ನಾಗರಿಕರೆನಿಸಿಕೊಂಡಿರುವ ನಮ್ಮ ಕರ್ತವ್ಯ  ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸ್ಪಷ್ಟನೆ ನೀಡಬೇಕು
ದಾರಿಯೇ ಇಲ್ಲದ ಹಳ್ಳಿಯಲ್ಲಿ ಒಬ್ಬ ಮತದಾನ ಮಾಡಲಾಗದೆ ಮನೆಯಲ್ಲಿದ್ದರೆ  ಸಂಜೆ ಹೊತ್ತಿಗೆ ಹೇಗಾದರೂ ಮಾಡಿ ಕಂಡು ಹಿಡಿದು ಎತ್ತಿಕೊಂಡು ಬರುವ ಮಹಾನ್ ರಾಜಕೀಯ ಕಾರ್ಯಕರ್ತರಿರುವ ನಮ್ಮ ರಾಜ್ಯದಲ್ಲಿ ಪುಟ್ಟ ಬಾಲಕ ಬಾಲಕಿಯರು ಪರೀಕ್ಷಾ ಕ್ಷೇಂದ್ರಕ್ಕೆ ಬರಲು ಆಡಚಣೆ ಉಂಟಾಗದಂತಹ ಕೆಲಸವೂ ನಡೆಯಲಿ

  • ಸತೀಶ್  ಶಂಕರಪುರ