ಜೊತೆಯಾಗಿ ಶೋ ಹೋಸ್ಟ್ ಮಾಡಲಿರುವ ಶಾರೂಕ್-ಸಲ್ಮಾನ್

2016 ಮುಗಿಯುತ್ತಾ ಬಂದಿದೆ. ಇನ್ನೇನು ಒಂದಾದ ಮೇಲೊಂದು ಅವಾರ್ಡ್ ಶೋಗಳ ಭರಾಟೆ ಶುರುವಾಗಲಿದೆ. ಈ ವರ್ಷ `ಪಿಂಕ್’, `ನೀರ್ಜಾ’, `ಉಡ್ತಾ ಪಂಜಾಬ್’, `ಏರ್ ಲಿಫ್ಟ್’, `ಡಿಯರ್ ಜಿಂದಗಿ’ ಮೊದಲಾದ ವಿಭಿನ್ನ ಚಿತ್ರಗಳೇ ಹೆಚ್ಚು ಯಶಸ್ಸು ಕಂಡಿದ್ದು ಯಾವ ಚಿತ್ರ ಅವಾರ್ಡ್ ಪಡೆಯಲಿದೆ ಎನ್ನುವ ಕುತೂಹಲವಂತೂ ಸಿನಿರಸಿಕರಿಗೆ ಇದ್ದೇ ಇದೆ.

ಈ ಭಾರಿ ಇನ್ನೂ ಒಂದು ವಿಶೇಷವೆಂದರೆ `ಸ್ಟಾರ್ ಸ್ಕ್ರೀನ್ ಅವಾರ್ಡ್’ ಫಂಕ್ಷನ್ನನ್ನು ಶಾರೂಕ್ ಖಾನ್ ಹಾಗೂ ಸಲ್ಮಾನ್ ಖಾನ್ ಜೊತೆಯಾಗಿ ಹೋಸ್ಟ್ ಮಾಡಲಿದ್ದಾರೆ. ಕೆಲವು ಸಮಯದ ಹಿಂದೆ ಹಾವು ಮುಂಗುಸಿಯಂತಿದ್ದ ಇವರಿಬ್ಬರೂ ಈಗ ಖಾಸಾ ದೋಸ್ತಿಗಳು. ಇದೀಗ ಇಬ್ಬರೂ ಖಾನ್‍ಗಳು ಅವಾರ್ಡ್ ಶೋದಲ್ಲಿ ಜೊತೆಯಾಗುತ್ತಿರುವುದರಿಂದ ಅವರಿಬ್ಬರ ಅಭಿಮಾನಿಗಳಿಗೆ ಥ್ರಿಲ್ ಆಗುವುದು ಸಹಜ.

ಅಂದ ಹಾಗೆ ಸಲ್ಮಾನ್ ಈಗ `ಟ್ಯೂಬ್ ಲೈಟ್’ ಚಿತ್ರದಲ್ಲಿ ಬ್ಯೂಸಿ ಇದ್ದರೆ ಶಾರೂಕ್ ಖಾನ್ ಅನುಷ್ಕಾ ಜೊತೆ ಇಮ್ತಿಯಾಜ್ ಆಲಿಯ `ದಿ ರಿಂಗ್’ ಚಿತ್ರದ ಶೂಟಿಂಗಿನಲ್ಲಿ ತೊಡಗಿಕೊಂಡಿದ್ದಾನೆ. ಶಾರೂಕ್ ಇನ್ನೊಂದು ಚಿತ್ರ `ರಾಯೀಸ್’ ಬರುವ ತಿಂಗಳು ಬಿಡುಗಡೆಯಾಗಲಿದೆ.