ಪ್ರಿಯತಮನ ಮರ್ಮಾಂಗ ಕತ್ತರಿಸಿದ ಯುವತಿ

ಭೋಪಾಲ್ : ತನ್ನ ಪ್ರಿಯತಮನಿಗೆ ಬೇರೊಬ್ಬಳೊಂದಿಗೆ ವಿವಾಹ ನಿಶ್ಚಯವಾಗಿದೆ ಎಂದು ತಿಳಿದು ಕೆಂಡಾಮಂಡಲಳಾದ ಮಧ್ಯ ಪ್ರದೇಶದ ಸಿದ್ದಿ ಜಿಲ್ಲೆಯ ಜಮೋದಿ ಗ್ರಾಮದ ಯುವತಿಯೊಬ್ಬಳು ಆತನನ್ನು ಉಪಾಯದಿಂದ ತನ್ನ ಮನೆಗೆ ಕರೆಸಿಕೊಂಡು ನಂತರ ಆತನಿಗೊಂದು `ಅಚ್ಚರಿ’ ನೀಡುತ್ತೇನೆಂದು ಹೇಳಿ ಆತನ ಬಟ್ಟೆ ಕಳಚಿ ಆತನ ಮರ್ಮಾಂಗವನ್ನು ಚಾಕುವಿನಿಂದ ಕತ್ತರಿಸಿಯೇ ಬಿಟ್ಟಿದ್ದಾಳೆ.

ಘಟನೆ ಸೋಮವಾರ ಸಂಜೆ ನಡೆದಿದ್ದು ಗಾಯಾಳು ಯುವಕ ಸಂಜಯ್ ಕೇವತ್ (24) ಎಂಬವನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಯುವತಿಯನ್ನು ಇನ್ನಷ್ಟೇ ಬಂಧಿಸಬೇಕಿದ್ದು ಆಕೆಯ ಮನೆಯಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದರೂ ಆಕೆ ಕತ್ತರಿಸಿ ಹಾಕಿದ್ದ ಯುವಕನ ಮರ್ಮಾಂಗ ಇನ್ನೂ ಪತ್ತೆಯಾಗಿಲ್ಲ.

ಕಳೆದೆರಡು ವರ್ಷಗಳಿಂದ ಮುಂಬೈಯಲ್ಲಿ ನೌಕರಿಯಲ್ಲಿದ್ದ ಸಂಜಯ್ ವಿವಾಹ ಇನ್ನೊಬ್ಬಳು ಯುವತಿಯೊಂದಿಗೆ ನಿಶ್ಚಿತಾರ್ಥವಾಗಿದ್ದರೂ ಆತ ತನ್ನ ಪ್ರಿಯತಮೆಯನ್ನು ಭೇಟಿಯಾಗುತ್ತಲೇ ಇದ್ದ. ಸೋಮವಾರ ಸಂಜೆ ಆತನನ್ನು ತನ್ನ ಮನೆಗೆ ಆಹ್ವಾನಿಸಿದ ಆಕೆ, ಆತನ ಕಣ್ಣನ್ನು ತನ್ನ ದುಪಟ್ಟಾದಿಂದ ಮುಚ್ಚಿ, `ಅಚ್ಚರಿ’ಯೊಂದನ್ನು ನೀಡುತ್ತೇನೆಂದು ಹೇಳಿ ಆತನನ್ನು ಹಾಸಿಗೆ ಮೇಲೆ ಮಲಗಿಸಿ, ಆತನ ಬಟ್ಟೆ ಬಿಚ್ಚಿ ಕೊನೆಗೆ ಮರ್ಮಾಂಗಕ್ಕೆ ಚಾಕುವಿನಿಂದ ಇರಿದಿದ್ದಳು. “ನನ್ನನ್ನು ವಿವಾಹವಾಗುವುದಿಲ್ಲವಾದರೆ ಬೇರ್ಯಾವುದೇ ಯುವತಿಯನ್ನೂ ನೀನು ವಿವಾಹವಾಗಬಾರದೆಂದು” ಆಕೆ ರೋಷದಿಂದ ಹೇಳಿದ್ದಳು. ಹರಸಾಹಸದಿಂದ ಯುವಕ ಅಲ್ಲಿಂದ ತನ್ನ ಮನೆಗೆ ಬಂದ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.