ಅಪಘಾತದ ತೀವ್ರತೆಗೆ ಗೂಡಂಗಡಿ ಧ್ವಂಸ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸು ಲಾರಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಧ್ವಂಸಗೊಳಿಸಿದ ಘಟನೆ ಮಾಣಿ ಜಂಕ್ಷನಲ್ಲಿ ನಡೆದಿದ್ದು ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ.

14vittla2

ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಮಂಗಳವಾರ ಬೆಳಗ್ಗೆ ಮಾಣಿ ಜಂಕ್ಷನ್ ತಲುಪುತ್ತಿದ್ದಂತೆಯೆ ಲಾರಿಯೊಂದು ಹಿಂದಕ್ಕೆ ಚಲಿಸಿತ್ತು. ಲಾರಿ ಹಿಂದಕ್ಕೆ ಚಲಿಸುತ್ತಿರುವುದನ್ನು ದಿಢೀರನೆ ಗಮನಿಸಿದ ಚಾಲಕ ಬಸ್ಸಿಗೆ ಬ್ರೇಕ್ ಹಾಕಿದ್ದರೂ ಅಷ್ಟರಲ್ಲಾಗಲೇ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಮತ್ತೂ ಮುಂದುವರಿದಿದ್ದ ಬಸ್ಸು ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಧ್ವಂಸಗೊಳಿಸಿ ಮರಕ್ಕೆ ಡಿಕ್ಕಿಯಾಗಿ ನಿಂತಿದೆ. ಘಟನೆಯಿಂದಾಗಿ ಬಸ್ಸು ಪ್ರಯಾಣಿಕ ಇಳಂತಿಲ ನಿವಾಸಿ ರಾಮಕೃಷ ್ಣ(34) ಗಾಯಗೊಂಡಿದ್ದು 108 ತುರ್ತು ವಾಹನದ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ತೀವ್ರತೆಗೆ ಗೂಡಂಗಡಿ ಅಪ್ಪಚ್ಚಿಯಾಗಿದ್ದರೆ ಬಸ್ಸು ಭಾರಿ ಜಖಂಗೊಂಡಿದೆ. ರಾತ್ರಿ 2 ಗಂಟೆಯಿಂದ ಬೆಳಗ್ಗೆ 7ಗಂಟೆಯವರೆಗೆ ಯಾಕುಬು ಎಂಬವರು ರಸ್ತೆ ಬದಿಯಲ್ಲಿನ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದು ಅಪಘಾತ ಸಂಭವಿಸುವ ಕೆಲ ಕ್ಷಣಗಳ ಮೊದಲಷ್ಟೆ ಬಂದ್ ಮಾಡಿ ಮನೆಗೆ ತೆರಳಿದ್ದ ಕಾರಣ ಬಚಾವಾಗಿದ್ದಾರೆ. ಬೆಳಗ್ಗೆ 7ಗಂಟೆಗೆ ಭೀಕರ ಅಪಘಾತ ಸಂಭವಿಸಿದ ಕಾರಣ 9ಗಂಟೆಯ ಬಳಿಕ ಅದೇ ಗೂಡಂಗಡಿ ಮುಂದೆ ಬಸ್ಸಿಗಾಗಿ ಕಾಯುತ್ತಿರುವ ಅದೆಷ್ಟೋ ಪ್ರಯಾಣಿಕರು ಕೂಡಾ ಅದೃಷ್ಟವಶಾತ್ ಪಾರಾಗಿದ್ದಾರೆ.