ಅಂಬಿ ಪುತ್ರ ಚಿತ್ರರಂಗಕ್ಕೆ ಬರ್ತಾನಾ?

ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಸುಮಲತಾರ ಪುತ್ರ ಅಭಿಷೇಕ್ ಸ್ಯಾಂಡಲ್ವುಡ್ಡಿಗೆ ಬರುವ ಅಭಿಲಾಷೆ ಹೊಂದಿದ್ದಾನೆ ಎನ್ನುವ ಸುದ್ದಿ ಈಗ ಗಾಂಧೀನಗರದಲ್ಲಿ ರೌಂಡ್ ಹೊಡೆಯುತ್ತಿದ್ದು ಇದು ಅಂಬಿ ಅಭಿಮಾನಿಗಳಿಗೆ ಥ್ರಿಲ್ ನೀಡುವ ವಿಷಯವಾಗಿದೆ.

ಅಭಿಷೇಕ್ ಇಲ್ಲಿಯವರೆಗೆ ಸಿನಿಮಾ ವಲಯಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿಲ್ಲ. ಓದುವ ಕಡೆಗೇ ಹೆಚ್ಚು ಒಲವಿರುವ ಅಭಿಷೇಕ್ ವಿದೇಶಕ್ಕೆ ಹೋಗಿ ಪೆÇಲಿಟಿಕಲ್ ಸೈನ್ಸ್‍ನಲ್ಲಿ ಮಾಸ್ಟರ್ ಡಿಗ್ರಿ ಪಡೆದು ಬಂದಿದ್ದಾನೆ. ಆದರೆ ಕೆಲವು ದಿನಗಳ ಹಿಂದೆ ಅಭಿ ತಾಯಿ ಸುಮಲತಾ ಈ ವಿಷಯವನ್ನು ಸೂಚ್ಯವಾಗಿ ಹೇಳಿದ್ದಾರೆ. “ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದಿದೆ.

ಅಪ್ಪನಂತೆ ಮಗನೂ ಹೀರೋ ಆದರೆ ಸಂತೋಷ” ಎಂದಿದ್ದಾಳೆ. ಅಂಬರೀಷ್ ಕೂಡಾ “ಮಗನಿಗೆ ಏನು ಇಷ್ಟವೊ ಅದನ್ನು ಮಾಡಲಿ ಚಿತ್ರರಂಗಕ್ಕೆ ಬಂದರೆ ನನ್ನದೇನೂ ಅಭ್ಯಂತರ ಇಲ್ಲ. ಆದರೆ ಆತ ಸ್ವಂತ ಪ್ರತಿಭೆಯಿಂದ ಜನರ ಮೆಚ್ಚುಗೆ ಗಳಿಸಬೇಕು” ಎಂದಿದ್ದಾರೆ.