ಬೇಸಿಗೆಗೆ ವಿಶೇಷ ರೈಲುಗಳು

ಉಡುಪಿ : ಬೇಸಿಗೆ ರಜಾದ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು ಕೊಂಕಣ ರೈಲ್ವೇಯು ಸೆಂಟ್ರಲ್ ರೈಲ್ವೇ ಸಹಕಾರದೊಂದಿಗೆ ಬೇಸಿಗೆಯಲ್ಲಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಪುಣೆ-ತಿರುನೆಲ್ವೆಲಿ ವಿಶೇಷ ರೈಲು ಎಪ್ರಿಲ್ 2ರಿಂದ ಜೂನ್ 4ರವರೆಗೆ ಪ್ರತಿ ಭಾನುವಾರ ಸಂಜೆ 4.15ಕ್ಕೆ ಪುಣೆಯಿಂದ ಹೊರಡಲಿದೆ. ತಿರುನಲ್ವೇಲಿ-ಪುಣೆ ವಾರದ ವಿಶೇಷ ರೈಲು 01322 ಎಪ್ರಿಲ್ 4ರಿಂದ ಆರಂಭಿಸಿ ಜೂನ್ 6ರವರೆಗೆ ಪ್ರತಿ ಮಂಗಳವಾರ ಬೆಳಗ್ಗೆ 7.20ಕ್ಕೆ ಹೊರಟು ಮರುದಿನ 8.40ಕ್ಕೆ ಪುಣೆಯನ್ನು ತಲುಪಲಿದೆ. ಈ ರೈಲು ಲೊನವಾಲ, ಕಲ್ಯಾಣ್, ಪನ್ವೇಲ್, ರೋಹ, ಖೆಡ್, ಚಿಪ್ಲುಣ್, ರತ್ನಗಿರಿ, ಕಂಕವಾಲಿ, ಕುಡಲ್, ತಿವಿಮ್, ಮಡಗಾನ್, ಕಾರವಾರ, ಕುಮಟಾ, ಭಟ್ಕಳ, ಮೂಕಾಂಬಿಕಾ ರೋಡು ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ತಳಸ್ಸೇರಿ, ಕೋಂಞಕೋಡು, ತಿರೂರು, ಶೋರನ್ನೂರು ಜಂಕ್ಷನ್, ಪಾಲ್ಗಾಟ್, ಪೊಳಚ್ಚಿ, ಉದುಮಲೈಪೆಟ್ಟೈ, ಪಳನಿ, ದಿಂಡಿಗಲ್, ಮಧುರೈ, ವಿರುದುನಗರ್, ಸಾತೂರು ಮತ್ತು ಕೋವಿಲಪಟ್ಟಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಅದೇ ರೀತಿ 01323 ಪುಣೆ-ಎರ್ನಾಕುಳಮ್ ಜಂಕ್ಷನ್ ವಾರದ ವಿಶೇಷ ರೈಲು ಎಪ್ರಿಲ್ 6ರಿಂದ ಆರಂಭಿಸಿ ಜೂನ್ 8ರವರೆಗೆ ಪ್ರತಿ ಗುರುವಾರ ಸಂಜೆ 4.15ಕ್ಕೆ ಪುಣೆಯಿಂದ ಹೊರಟು ಮರುದಿನ ರಾತ್ರಿ 8.15ಕ್ಕೆ ಎರ್ನಾಕುಳಮನ್ನು ತಲುಪಲಿದೆ.

01324 ಎರ್ನಾಕುಳಮ್-ಪುಣೆ ವಾರದ ವಿಶೇಷ ರೈಲು ಎಪ್ರಿಲ್ 7 ರಿಂದ ಆರಂಭಿಸಿ ಜೂನ್ 9ರವರೆಗೆ ಪ್ರತಿ ಶುಕ್ರವಾರ ರಾತ್ರಿ 11.30ಕ್ಕೆ ಎರ್ನಾಕುಳಂನಿಂದ ಹೊರಟು ಮೂರನೇ ದಿನ ಮುಂಜಾನೆ 2.45ಕ್ಕೆ ಪುಣೆಯನ್ನು ತಲುಪಲಿದೆ.

ಈ ರೈಲು ಲೊನವಾಲ, ಕಲ್ಯಾಣ, ಪನ್ವೇಲ್, ರೋಹಾ, ಖೆಡ್, ಚಿಪ್ಲುಣ್, ರತ್ನಗಿರಿ, ಕಂಕವಾಲಿ, ಕುಡಲ್, ತಿವಿಮ್, ಮಡಗಾಂ, ಕಾರವಾರ, ಕುಮಟಾ, ಭಟ್ಕಳ, ಮೂಕಾಂಬಿಕಾ ರೋಡು ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ತಳಸ್ಸೇರಿ, ಕೋಂಞÂಕೋಡು, ತಿರೂರು, ಶೊರನ್ನೂರು ಜಂಕ್ಷನ್, ತ್ರಿಶೂರು, ಅಳುವ ಮತ್ತು ಎರ್ನಾಕುಳಂ ಸ್ಟೇಷನುಗಳಲ್ಲಿ ನಿಲುಗಡೆಯಾಗಲಿದೆ.