ಖಾಸಗಿ ಸಂಸ್ಥೆಯ ಮೂಲಕ ಕಚೇರಿ ನವೀಕರಿಸಿದ ಸ್ಪೀಕರ್

ಕೆ ಬಿ ಕೋಳಿವಾಡ

ಬೆಂಗಳೂರು : ವಿಧಾನಸಭೆಯ ಸ್ಪೀಕರ್ ಕೆ ಬಿ ಕೋಳಿವಾಡ್ ಅವರಿಗೆ ವಿಧಾನಸೌಧದಲ್ಲಿ  ಈಗ ಹೊಸ ವಿಶಾಲವಾದ  ಹವಾನಿಯಂತ್ರಿತ ಕಚೇರಿಯೊಂದು ಲಭ್ಯವಾಗಿದೆ. ಕಚೇರಿಯನ್ನು  68 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಈ ಹಿಂದೆ ಅವರಿಗೆ  ಒಂದು ಕೊಠಡಿಯ ಕಚೇರಿಯಿದ್ದರೆ ಈಗ ಅದನ್ನು ವಿಸ್ತರಿಸಿ ಎರಡು ಕೊಠಡಿಗಳ ಕಚೇರಿಯನ್ನಾಗಿಸಲಾಗಿದೆ. ವಿಧಾನಸೌಧದ ಕಾಮಗಾರಿಗಳು ಸಾಮಾನ್ಯವಾಗಿ ಲೋಕೋಪಯೋಗಿ ಇಲಾಖೆಯೇ ನಿರ್ವಹಿಸುತ್ತದೆಯಾದರೂ  ಸ್ಪೀಕರ್ ಕಚೇರಿ  ನವೀಕರಣ ಕಾರ್ಯವನ್ನು ಆರ್ಕೆ ಎಂಟರಪ್ರೈಸಸ್ ಎಂಬ ಖಾಸಗಿ ಸಂಸ್ಥೆಗೆ ವಹಿಸಲಾಗಿತ್ತು. ಇದಕ್ಕೆ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಆಕ್ಷೇಪ ವ್ಯಕ್ತಪಡಿಸಿದ್ದರೂ ಕೋಳಿವಾಡ್ ತಮ್ಮ ನಿಲುವಿಗೆ ಅಂಟಿಕೊಂಡಿದ್ದರು.