ಭಾರತದ ಗಡಿಗೆ ಸ್ಪೇನ್-ಮೊರಾಕೋ ಲೇಪಿಸಿದ ಸರ್ಕಾರದ ಮಹಾಪ್ರಮಾದ

ಭಾರತದ ಗಡಿ ಪ್ರದೇಶವನ್ನು ಅಭಿವೃದ್ಧಿಪಡಿಸಲು ಮೋದಿ ಕೈಗೊಂಡ ಕ್ರಮ ನೋಡಿದರೆ ನೀವು ಹೆಮ್ಮೆಯಿಂದ ಸರಕಾರದ ಬೆನ್ನು ತಟ್ಟುತ್ತೀರಿ – ಇದು ಹಿಂದುತ್ವ ಗುಂಪುಗಳ ಪ್ರಚಾರದ ಒಂದು ಘೋಷಣೆ.

647 ಕಿ ಮೀ ವ್ಯಾಪ್ತಿಯ ಗಡಿಯಲ್ಲಿ ಝಗಮಗಿಸುವ ಸಾಲು ದೀಪಗಳನ್ನು ನೋಡಿದರೆ ಯಾವುದೇ ಭಾರತೀಯನಾದರೂ ಹೆಮ್ಮೆ ಪಡುವಂತಾಗುತ್ತದೆ. ಗಡಿಯೊಳಗೆ ನುಸುಳುವವರನ್ನು ತಡೆಗಟ್ಟಲು ಮೋದಿ ಸರ್ಕಾರ ಅದ್ಭುತವಾದ ಕೆಲಸ ಮಾಡಿದೆ ಎಂದು ಹೆಮ್ಮೆಯಿಂದ ಸ್ವತಃ ಬೆನ್ನು ತಟ್ಟಿಕೊಳ್ಳುತ್ತಿರುವಾಗಲೇ ಕೇಂದ್ರ ಗೃಹ ಸಚಿವಾಲಯ ಇದು ಮೋದಿ ಸರ್ಕಾರದ ಮೂರು ವರ್ಷದ ಸಾಧನೆ ಎಂದು ಬೆನ್ನುತಟ್ಟಿಕೊಳ್ಳತೊಡಗಿತ್ತು.  ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಕಂಡುಬಂದ ಸತ್ಯ ಎಂದರೆ ಕೇಂದ್ರ ಸರ್ಕಾರ ಹೆಮ್ಮೆಯಿಂದ ಪ್ರಕಟಿಸಿದ ಝಗಮಗಿಸುವ ಗಡಿ ರೇಖೆಯ ಚಿತ್ರ ಭಾರತದ್ದಲ್ಲ. ಸ್ಪೇನ್ ಮತ್ತು ಮೊರಾಕೋ ನಡುವೆ ಇರುವ ಗಡಿ ರೇಖೆಯನ್ನೇ ಬಿತ್ತರಿಸಿ ಮೋದಿ ಸರ್ಕಾರದ ಸಾಧನೆ ಎಂದು ಬಿಂಬಿಸಿದ್ದು ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ. ಭಾರತದ ಗಡಿ ಪ್ರದೇಶವನ್ನೇ ಬಿತ್ತರಿಸಬಹುದಾಗಿದ್ದ ಸರ್ಕಾರ ಇತರ ದೇಶಗಳ ಗಡಿಯನ್ನು ತನ್ನದೆಂದು ಬಿಂಬಿಸಿರುವುದು ವ್ಯಾಪಕ ಖಂಡನೆಗೂ ಗುರಿಯಾಗಿದೆ.