‘ರಿಯಾಝ್ ಕೊಲೆ ಪ್ರಕರಣ ತನಿಖೆ ತೃಪ್ತಿದಾಯಕವಾಗಿದೆ’

ಎಸ್ಪಿ ಸೈಮನ್

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : “ಮದ್ರಸ ಅಧ್ಯಾಪಕ ರಿಯಾಝ್ ಕೊಲೆ ಪ್ರಕರಣದ ವಿಶೆಷ ತನಿಖಾ ತಂಡ ನಡೆಸಿದ ಅನ್ವೇಷಣೆ ತೃಫ್ತಿದಾಯಕವಾಗಿದೆ. ಸರಿಯಾದ ಸಾಕ್ಷ್ಯಗಳೊಂದಿಗೆ ಪ್ರಕರಣದ ತನಿಖೆ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೌಲವಿ ಕೊಲೆ ಪ್ರಕರಣದ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ”ವೆಂಬುದಾಗಿ ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ಕೆ ಜೆ ಸೈಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ರಾತ್ರಿ ನಡೆಯುತ್ತಿರುವ ಕ್ರೀಡೆಗಳಿಗೆ ಪೆÇಲೀಸರ ಅನುಮತಿ ಕಡ್ದಾಯವಾಗಿದೆ. ಪೆÇಲೀಸರ ಅನುಮತಿ ಇಲ್ಲದೆ ಕ್ರೀಡೆಗಳನ್ನು ನಡೆಸಿ ಅಲ್ಲಿ ಏನಾದರೂ ಅಹಿತಕರ ಘಟನೆ ಗಳೇನಾದರೂ ಸಂಭವಿಸಿದರೆ ಅದಕ್ಕೆ ಸಂಘಟನೆಯವರು ಜವಾಬ್ದಾರಾಗಿ ರುತ್ತಾರೆ. ಅಂತಹವರ ವಿರುದ್ದ ಕೇಸು ದಾಖಲಿಸಲಾಗುವುದು. ನಗರದಲ್ಲಿ ಪೆÇಲೀಸರ ಗಸ್ತು ತಿರುಗಾಟವನ್ನು ತೀವ್ರಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಹೊಸ ವಾಹನಗಳು ಕೂಡಾ ಕಾಸರಗೋಡಿಗೆ ಶೀಘ್ರದಲ್ಲೇ ತಲುಪಲಿದೆ. ಅದೇ ರೀತಿ ಸಾಮಾಜಿಕ ತಾಣಗಳಲ್ಲಿ ಕೋಮು ದ್ವೇಷ ಮೂಡಿಸುವ ರೀತಿಯಲ್ಲಿ ಪ್ರಚಾರ ನಡೆಸುವವರ ವಿರುದ್ದ ಕೂಡಾ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.