ಆಕ್ಷೇಪಾರ್ಹ ಆಡಿಯೋ ಕ್ಲಿಪ್ ಧ್ವನಿ ನನ್ನದಲ್ಲ

ಎಸ್ಪಿ ಅಣ್ಣಾಮಲೈ ಸ್ಪಷ್ಟನೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ತಮ್ಮ ನೇರ ಹಾಗೂ ದಿಟ್ಟ ಕ್ರಮಗಳ ಮೂಲಕ ಜನಪ್ರಿಯರಾಗಿದ್ದ  ಉಡುಪಿ ಜಿಲ್ಲೆಯ ಮಾಜಿ ಎಸ್ಪಿ, ಪ್ರಸ್ತತ ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ  ಅಣ್ಣಾಮಲೈ ಅವರೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ  ಆಡಿಯೋ ಕ್ಲಿಪ್ ಒಂದರÀ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ.

13.45 ನಿಮಿಷ ಅವಧಿಯ ಈ ಆಡಿಯೋ ಕ್ಲಿಪ್ಪಿನಲ್ಲಿ ಇಬ್ಬರ ನಡುವಿನ ಸಂಭಾಷಣೆ ಕೇಳುತ್ತಿದ್ದು ಅದರಲ್ಲೊಂದು ಧ್ವನಿ ಈ ಹಿಂದೆ ಮಲ್ಪೆ ಠಾಣೆಯಲ್ಲಿ ಸೇವೆಯಲ್ಲಿದ್ದ ಅಸಂತುಷ್ಟ ಕಾನಸ್ಟೇಬಲ್ ಒಬ್ಬರದ್ದೆಂದು ಹೇಳಲಾಗಿದ್ದರೆ ಇನ್ನೊಂದು  ಧ್ವನಿ ಅಣ್ಣಾಮಲೈ ಅವರದ್ದು ಎಂಬರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡುತ್ತಿವೆ. ಈ ಸಂಭಾಷಣೆಯಲ್ಲಿ ತೊಡಗಿರುವ ಇನ್ನೊಬ್ಬ ವ್ಯಕ್ತಿ  ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ನಿಂದಿಸುವ ಮಾತುಗಳಿವೆ.

ಆದರೆ ಇದು ತನ್ನ ಧ್ವನಿಯಲ್ಲ ಎಂದು ಹೇಳಿರುವ ಅಣ್ಣಾಮಲೈ ಜನರು ಈ ಆಡಿಯೋ ಕ್ಲಿಪ್ಪಂಗ್ ಶೇರ್ ಮಾಡದಂತೆ ಮನವಿ ಮಾಡಿದ್ದಾರೆ. “ಕೆಲ ದುಷ್ಕರ್ಮಿಗಳು ಈ ಆಡಿಯೋ ಕ್ಲಿಪ್ಪಿನಲ್ಲಿ ಕೇಳಿಸುವ ಇನ್ನೊಂದು ಧ್ವನಿ ನನ್ನದೆಂದು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ. ನಾನು ಉಡುಪಿ ಎಸ್ಪಿ ಆಗಿದ್ದಾಗ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಇತರ ನಾಯಕರಿಂದ ಉತ್ತಮ ಸಹಕಾರ ದೊರೆತಿದ್ದು ಅವರೆಲ್ಲರ ಬಗ್ಗೆ ಗೌರವದ ಭಾವನೆ ಹೊಂದಿದ್ದೇನೆ” ಎಂದು ಅಣ್ಣಾಮಲೈ ಸ್ಪಷ್ಟೀಕರಣ ನೀಡಿದ್ದಾರೆ.

ತನ್ನ ಹೆಸರಿಗೆ ಅನಗತ್ಯ ಮಸಿ ಬಳಿಯುವವರ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಆಡಿಯೋ ಕ್ಲಿಪ್ ಶೇರ್ ಮಾಡುವವರ ವಿರುದ್ಧ ಕ್ರಮ ಕೈಗೊಳುವುದಾಗಿಯೂ ಅವರು ಎಚ್ಚರಿಸಿದ್ದಾರೆ.

“ಈ ಆಡಿಯೋ ಕ್ಲಿಪ್ಪಿನಲ್ಲಿರುವ ಸಂಭಾಷಣೆ ಕಾನಸ್ಟೇಬಲ್ ಹಾಗೂ ಅನಧಿಕೃತ ಪೊಲೀಸ್ ಸಂಘಟನೆಯೊಂದನ್ನು ನಡೆಸುತ್ತಿರುವ ಮಾಜಿ ಪೊಲೀಸ್ ಸಿಬ್ಬಂದಿ ಶಶಿಧರ್ ª ಅವರ ನಡುವೆ ನಡೆದಿದೆ ಎಂದು ಪರಿಶೀಲನೆ ಮೂಲಕ ತಿಳಿದು ಬಂದಿದೆ. ಸಂಬಂಧಿತ ಕಾನಸ್ಟೇಬಲ್ ಅವರೊಡನೆ ಮಾತನಾಡಿ ಈ ಸಂಭಾಷಣೆ ಆತನ ಹಾಗೂ ವೇಣುಗೋಪಾಲ್ ನಡುವೆ ನಡೆದಿದೆ ಎಂಬುದನ್ನು ದೃಢೀಕರಿಸಿದ್ದೇನೆ” ಎಂದು ಅಣ್ಣಾವiಲೈ ಹೇಳಿದ್ದಾರೆ.

ಆಡಿಯೋ ಕ್ಲಿಪ್ಪಿಂಗನ್ನು ಶಶಿಧರ್ ಕೂಡ ತನ್ನ ಫೇಸ್ಬುಕ್ ಪುಟದಲ್ಲಿ ಸೌಂಡ್ ಕ್ಲೌಡ್ ಅಪ್ಲಿಕೇಶನ್ ಮುಖಾಂತರ ಎಪ್ರಿಲ್ 8ರಂದು  ಅಪ್ಲೋಡ್ ಮಾಡಿದ್ದಾರೆ.