ಕಿಡ್ನಾಪ್ ಕೇಸು : ತಂದೆಯಿಂದ ಸುರತ್ಕಲ್ ಪೊಲೀಸರಿಗೆ ದೂರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸುರತ್ಕಲ್ ಸಮೀಪದ ಯುವಕನೊಬ್ಬನನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಉತ್ತರ ಉಪವಿಭಾಗದ ಎಸಿಪಿ ರಾಜೇಂದ್ರ ಅವರ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಹೇಳಿದ್ದಾರೆ.

ಸುರತ್ಕಲ್-ಕೃಷ್ಣಾಪುರದ ಸಫ್ವಾನನನ್ನು ಯುವಕರ ತಂಡವೊಂದು ಮನೆಗೆ ಆಗಮಿಸಿ ಕರೆದುಕೊಂಡು ಹೋಗಿ ಕಿಡ್ನಾಪ್ ಮಾಡಿತ್ತು ಎಂದು ತಂದೆ ದೂರಿದ್ದರು.

ಸಿಸಿಬಿ ಅಲ್ಲದೆ ದಕ್ಷಿಣ ಮತ್ತು ಉತ್ತರ ಉಪ ವಿಭಾಗಗಳಲ್ಲಿ ಎರಡು ರೌಡಿ ನಿಗ್ರಹ ದಳಗಳನ್ನು ರಚಿಸಲಾಗಿದೆ ಎಂದವರು ಹೇಳಿದರು. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿ ಪಟ್ಟಿಯಲ್ಲಿ ಸುಮಾರು 2000 ಮಂದಿ ಇದ್ದು, ಅವರಲ್ಲಿ 100 ಮಂದಿ ಸಕ್ರಿಯರಾಗಿದ್ದಾರೆ. ಅವರೆಲ್ಲರನ್ನೂ ಠಾಣೆಗೆ ಕರೆಸಿಕೊಂಡು ಮುಚ್ಚಳಿಕೆ ಬರೆದು ಎಚ್ಚರಿಕೆ ನೀಡಲಾಗುವುದು. ತಪ್ಪಿಸಿಕೊಂಡವರನ್ನೂ ಹುಡುಕಿ ತರಲು ಪ್ರಯತ್ನಿಸಲಾಗುವುದು ಎಂದರು.