ಕರಾವಳಿಯ ಕೆಲ ಎಟಿಎಂಗಳಲ್ಲಿ 500, 100 ರೂ ನೋಟು ಲಭ್ಯ

FAYETTEVILLE, NC - AUGUST 03: A man puts a card into an ATM August 3, 2010 in Fayetteville, North Carolina. A US government report issued August 3 gave evidence that the economic recovery is being stalled by sluggish consumer spending and weak personal incomes. (Photo by Chris Hondros/Getty Images)

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜನರನ್ನು ಕಾಡುತ್ತಿರುವ ಚಿಲ್ಲರೆ ಸಮಸ್ಯೆ ಮತ್ತು ಎಟಿಎಂಗಳಲ್ಲಿ ಇದುವರೆಗೆ ಲಭ್ಯ ಇರದ 500 ಮತ್ತು 100 ರೂ ನೋಟುಗಳು ಇನ್ಮುಂದೆ ಲಭ್ಯವಾಗಲಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಸೋಮವಾರದಿಂದ ಎಟಿಎಂಗಳಲ್ಲಿ ಹೊಸ 500 ಮತ್ತು 100 ರೂ ನೋಟುಗಳು ಸಿಗುತ್ತಿವೆ. ಇದುವರೆಗೆ ಹೆಚ್ಚಿನ ಎಟಿಎಂಗಳಲ್ಲಿ ಕೇವಲ 2000 ರೂ.ನ ಒಂದು ನೋಟು ಬರುತ್ತಿತ್ತು.

500 ರೂ ನೋಟುಗಳನ್ನು ಬ್ಯಾಂಕಿನಲ್ಲಿ ವಿತರಣೆ ಮಾಡುವ ಬದಲು ಎಟಿಎಂ ಕೇಂದ್ರಗಳ ಮೂಲಕ ನೀಡಲು ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಹೀಗಾಗಿ ಈಗಾಗಲೇ ಮಂಗಳೂರು ಮತ್ತು ಉಡುಪಿಯ ಕೆಲವು ಎಟಿಎಂಗಳಲ್ಲಿ 500 ಮತ್ತು 100 ರೂ ನೋಟುಗಳು ಲಭ್ಯವಾಗುತ್ತಿವೆ ಎಂದು ಬ್ಯಾಂಕಿನ ಮೂಲಗಳು ತಿಳಿಸಿವೆ.

ಇನ್ನು ಕೆಲವು ಕಡೆಗಳಲ್ಲಿ ತಾಂತ್ರಿಕ ಕಾರಣಗಳಿಂದಾಗಿ ನೋಟುಗಳ ವಿತರಣೆ ಮಾಡಲಾಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ಸಮಸ್ಯೆ ಬಗೆಹರಿಸಲಾಗುವುದು, ಇದೀಗ ಮಂಗಳೂರಿನಲ್ಲಿ ಇದುವರೆಗೆ ಮುಚ್ಚಿದ್ದ ಎಟಿಎಂ ಕೇಂದ್ರಗಳು ತೆರೆದಿದ್ದು, ಹೆಚ್ಚಿನ ಕೇಂದ್ರಗಳಲ್ಲಿ 2000 ರೂ ನೋಟಿನ ಜೊತೆಗೆ 500 ಮತ್ತು 100 ರೂ ನೋಟು ಲಭ್ಯ ಇದೆ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.