ಸೋಮನಾಥ ಬಂಧನ ಆದೇಶ ತಡೆ ಸಂಬಂಧ ವಾದ-ವಿವಾದ ಅಲಿಕೆ ಸೆಪ್ಟೆಂಬರ್ 21ರಂದು

ಸಾಂದರ್ಭಿಕ ಚಿತ್ರ

ಬೆಳ್ತಂಗಡಿ : ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಜಡ್ಜ್ ನ್ಯಾಯಾಲಯ ಸಿವಿಲ್ ಎಂ ಸಿ 3/15 ಮತ್ತು 8/15ರಲ್ಲಿ ನೀಡಿರುವ ಸಿವಿಲ್ ಬಂಧನ ಆದೇಶದ ವಿರುದ್ಧ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ ಸೋಮನಾಥ ನಾಯಕರ ವಕೀಲ ಭಾಸ್ಕರ ಹೊಳ್ಳರು ಸಲ್ಲಿಸಿದ ಮೇಲ್ಮನವಿ ಎಂ ಎ 10/17 ಮತ್ತು ಎಂ ಎ 11/17ರಂತೆ ಸಿವಿಲ್ ಬಂಧನದ ಆದೇಶವನ್ನು 21.9.2017ರವರೆಗೆ ತಡೆಹಿಡಿಯಲಾಗಿದೆ ಎಂದು ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ.

ಈ ಮೇಲ್ಮನವಿಯ ಬಗ್ಗೆ ಎದುರುದಾರ ವೀರೇಂದ್ರ ಹೆಗ್ಗಡೆಯವರು ಆಕ್ಷೇಪ ಸಲ್ಲಿಸಿದ್ದು, ಮೇಲ್ಮನವಿಯ ವಾದ-ಪ್ರತಿವಾದಕ್ಕಾಗಿ 21.9.2017 ದಿನಾಂಕವನ್ನು ನ್ಯಾಯಾಲಯ ನಿಗದಿಪಡಿಸಿದೆ ಎಂದು ನಾಗರಿಕ ಸೇವಾ ಟ್ರಸ್ಟ್ ತಿಳಿಸಿದೆ.