ಬೆಳ್ಮ ರೆಂಜಾಡಿ ಕಸದ ಸಮಸ್ಯೆಗೆ ಮುಕ್ತಿ ನೀಡಿ

ಸಾಂದರ್ಭಿಕ ಚಿತ್ರ

ಬೆಳ್ಮ ಗ್ರಾಮದ ರೆಂಜಾಡಿ ಬಡಗಬೈಲಿನ ಕಸದ ಸಮಸ್ಯೆ ಇಲ್ಲಿನ ಸಾರ್ವಜನಿಕರನ್ನು ತೀವ್ರವಾಗಿ ಕಾಡುತ್ತಿದೆ  ಈ ಪ್ರದೇಶದಲ್ಲಿ ಸುತ್ತಮುತ್ತಲಿನ ಕೋಳಿಯ ತ್ಯಾಜ್ಯ  ಪ್ಲಾಸ್ಟಿಕ್  ಮನೆ  ಹೊಟೇಲುಗಳ ಕೊಳೆತ ತ್ಯಾಜ್ಯಗಳನ್ನು ಇಲ್ಲಿಯೇ ತಂದು ರಾಶಿ ಹಾಕಿ ಕಸದ ಗುಡ್ಡೆಯ ನಿರ್ಮಾಣವಾಗಿದೆ  ಇಲ್ಲಿ ಮೂಗಿದ್ದವರು ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ  ಕಾಗೆ  ನಾಯಿ ಮುಂತಾದ ಪ್ರಾಣಿಗಳು ಈ ಕಸಗಳನ್ನು ದಾರಿ ಮಧ್ಯೆ  ಹತ್ತಿರದ ಬಾವಿಗೆ ತಂದು ಹಾಕುವುದರಿಂದ ಕುಡಿಯುವ ನೀರು ಕಲುಷಿತಗೊಂಡು ಇಲ್ಲಿನ ನಾಗರಿಕರು ಹಲವಾರು ರೋಗ ರುಜಿನಗಳಿಗೆ ತುತ್ತಾಗಿ ಆಸ್ಪತ್ರೆ ಸೇರುವಂತಾಗಿದೆ
ಇಲ್ಲಿನ ಅಧ್ಯಕ್ಷರಲ್ಲಿ ಈ ಬಗ್ಗೆ ದೂರಿತ್ತರೆ ಉಪಾಧ್ಯಕ್ಷರು  ಪಿಡಿಓಗಳು ನನ್ನ ಮಾತು ಕೇಳದಿದ್ದರೆ ನಾನೇನು ಮಾಡಲಿ ಎಂಬ ಉಡಾಪೆಯ ಉತ್ತರ ನೀಡುತ್ತಾರೆ  ಮೋದಿಯವರ ಕನಸಿನ ಕೂಸಾದ ಸ್ವಚ್ಛ ಭಾರತ್ ಕಾರ್ಯಕ್ರಮಕ್ಕೆ ಇಲ್ಲಿನ ಬೇಜವಾಬ್ದಾರಿಯಿಂದ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಕವಡೆ ಕಾಸಿನ ಬೆಲೆಯೂ ಇಲ್ಲದಂತಾಗಿದೆ  ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರನ್ನು ನೀಡಿದ್ದು  ಜನರಿಂದ ಓಟು ಪಡೆದ ಜನ ಪ್ರತಿನಿಧಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಇದನ್ನು ಸ್ಥಳಾಂತರಗೊಳಿಸಬೇಕು. ಇಲ್ಲವಾದಲ್ಲಿ ಬಡಗಬೈಲಿನ ಸಾರ್ವಜನಿಕರು ಬೆಳ್ಮ ಪಂಚಾಯತಗೆ ಮುತ್ತಿಗೆ ಹಾಕುವ ದಿನ ದೂರವಿಲ್ಲ

  • ಶೇಖಬ್ಬ ಬ್ಯಾರಿ  ಗ್ರಾಮಸ್ಥರ ಪರವಾಗಿ  ಬೆಳ್ಮ