ಸೆಂಟ್ರಲ್ ಮಾರ್ಕೆಟ್ ಅವ್ಯವಸ್ಥೆ ಸರಿಪಡಿಸಿ

ಮಂಗಳೂರಿನ ಮಾರ್ಕೆಟುಗಳ ಅವ್ಯವಸ್ಥೆ ಹೇಳತೀರದು. ಸೆಂಟ್ರಲ್ ಮಾರ್ಕೆಟ್ ತುಂಬಾ ಹಳೆಯದಾಗಿದ್ದು, ಇದನ್ನು ನೆಲಸಮ ಮಾಡಿ ಹೊಸ ಮಾರ್ಕೆಟ್ ಹೈಟೆಕ್ ಮಾಡುವ ಬಗ್ಗೆ ಬ್ಲ್ಯೂಪ್ರಿಂಟ್ ತಯಾರಾಗಿದೆ. ಕೂಡಲೇ ಹೊಸ ಮಾರ್ಕೆಟ್ ಕಟ್ಟಲಾಗುವುದು ಎಂಬುದಾಗಿ ಎಲ್ಲಾ ಪತ್ರಿಕೆಗಳಲ್ಲೂ ಇತರ ಮಾಧ್ಯಮಗಳಲ್ಲಿ ವರದಿ ಬಂದರೂ ಇಷ್ಟರತನಕ ಹೊಸ ಮಾರ್ಕೆಟ್ ನಿರ್ಮಾಣವಾಗಿಲ್ಲ ನಿಜಕ್ಕೂ ಇಲ್ಲೊಂದು ಹೊಸ ವೆಜಿಟೆಬಲ್ ಹಾಗೂ ಮಾಂಸ ಮೀನಿನ ಮಾರ್ಕೆಟಿನ ಅಗತ್ಯವಿದೆ ಮಾಂಸ ಮೀನು ತರಕಾರಿ ಇವೆಲ್ಲಾ ಒಂದೇ ಛಾವಣಿಯಡಿಯಲ್ಲಿ ದೊರಕುವಂತಾಗಬೇಕಾಗಿದೆ ಮೀನಿಗೆ ಸ್ಟೇಟ್ ಬ್ಯಾಂಕ್ ಹತ್ತಿರ ಕೋಳಿ ಕುರಿ ಮಾಂಸಕ್ಕೆ ಇನ್ನೊಂದು ಕಟ್ಟಡಕ್ಕೆ, ತರಕಾರಿಗೋಸ್ಕರ ಮಗದೊಂದು ಕಡೆಗೆ ಹೋಗುವುದಾದರೂ ಯಾಕೆ ಇವೆಲ್ಲ ಒಂದೇ ಆವರಣದೊಳಗೆ ಒಂದೇ ಕಟ್ಟಡದೊಳಗೆ ಸಿಗುವುದಾದರೆ ಅಲ್ಲಿ-ಇಲ್ಲಿ ಅಲೆಯುವ ಅಗತ್ಯವಿದೆಯೇ ನಮ್ಮ ತರಕಾರಿಯ ಸೆಂಟ್ರಲ್ ಮಾರ್ಕೆಟ್ ತೀರಾ ದುರವಸ್ಥೆಯಿಂದ ತುಂಬಿದೆ. ಒಳಗೆ ಹೊಕ್ಕಿದರೆ ಆಚೆ-ಈಚೆ ನಡೆದಾಡಲು ತುಂಬಾ ಕಷ್ಟಕರವಾಗಿ ಪರಿಣಮಿಸಿದೆ ಮೊದಲು ಅತ್ತಿತ್ತ ನಡೆದಾಡಲು ತುಂಬಾ ಸಲೀಸಾಗಿತ್ತು. ಆದರೆ ಈ ಅಚೀಚೆ ಹೋಗುವ ದಾರಿಯ ಅಗಲ ದಿನ ಹೋದಂತೆ ಕಿರಿದಾಗಿದೆ. ತರಕಾರಿ ಹಣ್ಣು ಇಡುವ ಡಬ್ಬಿ ಪ್ಲಾಸ್ಟಿಕ್ ಬಾಕ್ಸುಗಳೆಲ್ಲಾ ಮುಂದೆ ಮುಂದೆ ಬಂದು ಕೂತಿವೆ. ಅಲ್ಲದೇ ಗಿರಾಕಿಗಳು ಅಂಗಡಿ ಮುಂದೆ ನಿಂತರೆ ಹೋಗಿ ಬರುವವರಿಗೆ ಅಡ್ಡಿ ಆಡಚಣೆಯಾಗುತ್ತದೆ. ಮೊದಲೆಲ್ಲಾ ಮನಪಾ ವತಿಯಿಂದ ಸಿಬ್ಬಂದಿಗಳು ಒಂದು ವಾರಕ್ಕೊಂದು ಅಥವಾ ಎರಡು ಬಾರಿ ಬಂದು ಸ್ಥಳ ಪರಿಶೀಲನೆಗೆ ಬರುತ್ತಿದ್ದರು ಆಗ ವ್ಯವಸ್ಥೆ ಸರಿ ಇದ್ದು, ಈಗ ತೀರಾ ಹದಗೆಟ್ಟಿದೆ ಗಿರಾಕಿಗಳ ಕಡೆ ಯಾರೊಬ್ಬರೂ ಗಮನ ಹರಿಸದಂತೆ ಕಾಣುತ್ತದೆ ಹಾಗಾಗಿ ಇಲ್ಲಿ ಕಾಲುದಾರಿಗೆ ಬಿಳಿ ಬಣ್ಣ ಲೈನ್ ಹಾಕಿ ತರಕಾರಿ ಡಬ್ಬಿ ಇದರೊಳಗೆ ಇರಿಸುವ ಯತ್ನ ಮಾಡಿ ಗಿರಾಕಿಗಳಿಗೆ ಒಳ್ಳೆಯ ಸೌಕರ್ಯ ಕಲ್ಪಿಸಿ ಕೊಡಲೇಬೇಕಾಗಿದೆ

  • ಜೆ ಎಫ್ ಡಿ’ಸೋಜ  ಅತ್ತಾವರ