ಯೋಧರು ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ ಎಂದಾದರೆ ಸರಕಾರ ಏನು ಮಾಡುತ್ತಿದೆ

ಯೋಧರು ದೇಶವನ್ನು ಕಾಯುವ ಪವಿತ್ರವಾದ ಕಾಯಕದಲ್ಲಿ ನಿರತವಾಗಿರುವುದರಿಂದಲೇ ನಾವೆಲ್ಲ ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ. ಹೀಗಿರುವಾಗ ಯೋಧರಿಗೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿ ಮನಕಲಕಿತು. ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡುವ ಯೋಧರನ್ನು ಸರಕಾರ ಈ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದು ನಿಜಕ್ಕೂ ಅಮಾನವೀಯ.
ಯೋಧರು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ದೇಶದಲ್ಲಿದೆ ಎಂದಾದರೆ ಭಾರತ ಸರಕಾರ ಏನು ಮಾಡುತ್ತಿದೆ ? ರಂಗುರಂಗಿನ ಬದುಕನ್ನೇ ಎದುರು ನೋಡುತ್ತಿರುವ ಈ ದೇಶದ ರಾಜಕಾರಣಿಗಳ ಮೇಲೆ ಬೇಸರ ಉಲ್ಭಣಗೊಳ್ಳುತ್ತಿದೆ. ದೇಶ ಕಾಯುವ ಯೋಧರೇ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ನಾಗರಿಕರು ಎದುರಿಸುತ್ತಿರುವ ಲೋಪದೋಷಗಳು ಸೇನಾ ವ್ಯವಸ್ಥೆಯಲ್ಲಿಯೂ ಇವೆ ಎಂದಾಯಿತು. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತೇನೆ ಎಂದು ಶಪತಗೈದ ಮಹಾತ್ಮರು ಈ ವಿಚಾರವಾಗಿ ಮೌನವ್ರತ ಆಚರಿಸುತ್ತಿರುವುದು ಸಂಶಯ ಹುಟ್ಟಿಸುವಂಥದ್ದು

  • ಸುರೇಶ್ ಸುವರ್ಣ
    ಅಲಂಗಾರು-ಮೂಡಬಿದ್ರೆ