ತಂದೆಯ ಗುಂಡೇಟಿಗೆ ಸೈನಿಕ ಮಗ ಮೃತ

ಸಾಂದರ್ಭಿಕ ಚಿತ್ರ

ಬೆಳಗಾವಿ : ಸಣ್ಣ ವಿಷಯಕ್ಕಾಗಿ ಕೋಪೋದ್ರಿಕಗೊಂಡ ತಂದೆಯೊಬ್ಬ ತನ್ನ ಮಗನಿಗೆ ಗುಂಡಿಕ್ಕೆ ಸಾಯಿಸಿದ್ದು, ಘಟನೆ ವೇಳೆ ಪತ್ನಿ ಮತ್ತು ಪುತ್ರಿ ಗಾಯಗೊಂಡ ಘಟನೆ ಬೈಲಹೊಂಗಲದ ನಯಾನಗರದಲ್ಲಿ ನಿನ್ನೆ ನಡೆದಿದೆ.

ಈ ಘಟನೆ ಬಳಿಕ ಆರೋಪಿ ತಂದೆ ವಿಠಲ್ ಪರಾರಿಯಾಗಿದ್ದಾನೆ. ಕೊಲೆಯಾದ ಈತನ ಮಗ ಈರಣ್ಣ ಇಂಡಿ (21) ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ.

ಗಾಯಗೊಂಡ ಆರೋಪಿಯ ಪತ್ನಿ ಅನಸೂಯ (40) ಮತ್ತು ಪುತ್ರಿ ಪ್ರೀತಿ (19) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಜೆಯಲ್ಲಿ ಮನೆಗೆ ಈರಣ್ಣ ಬಂದಿದ್ದ. ತಂದೆ ಮತ್ತು ಮಗನ ಮಧ್ಯೆ ಹಣದ ವಿಷಯದಲ್ಲಿ ವಾದ ನಡೆದಿದ್ದು, ಇದು ಹಿಂಸಾರೂಪ ಪಡೆದಿದೆ. ಕೋಪಗೊಂಡ ವಿಠಲ್, ಮಗನತ್ತ ಪರವಾನಿಯುಳ್ಳ ಬಂದೂಕಿನಿಂದ ಐದು ಗುಂಡು ಎಸೆದಿದ್ದಾನೆ. ಈ ವೇಳೆ ಅನಸೂಯ ಮತ್ತು ಪ್ರೀತಿ ಇಬ್ಬರನ್ನೂ ಸಮಾಧಾನಿಸಲು ಪ್ರಯತ್ನಿಸಿದ್ದರು. ಸದ್ಯ ಆರೋಪ ವಿಠಲ್ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.