ಫ್ರಾನ್ಸ್ ದೇಶದಲ್ಲಿ ಸೋಲಾರ್ ಪ್ಯಾನೆಲ್ ರಸ್ತೆ ಅನಾವರಣ

ಪ್ಯಾರಿಸ್ :  ಎಲ್ಲೆಡೆ ರೂಫ್ ಟಾಪ್ ಸೋಲಾರ್  ಪ್ಯಾನೆಲ್ಲುಗಳು  ಜನಪ್ರಿಯವಾಗಿದ್ದರೆ, ಫ್ರಾನ್ಸ್ ದೇಶದ ನೊರ್ಮಂಡಿಯಲ್ಲಿರುವ ತೌರೌವ್ರೆ ಔ ಪರ್ಚ್ ಎಂಬ ಗ್ರಾಮದಲ್ಲಿ ವಿಶ್ವದ ಪ್ರಪ್ರಥಮ ಸೋಲಾರ್ ಪ್ಯಾನೆಲ್ ರಸ್ತೆ ಲೋಕಾರ್ಪಣೆಗೊಂಡಿದೆ.

ಈ ಒಂದು ಕಿ ಮೀ ಉದ್ದದ ರಸ್ತೆಯಲ್ಲಿ 2,800 ಚದರ ಮೀಟರ್  ಪ್ರದೇಶದಲ್ಲಿ ವಿದ್ಯುತ್ ಉತ್ಪಾದಿಸುವ ಸೋಲಾರ್ ಪ್ಯಾನೆಲ್ಲುಗಳಿದ್ದು  ಈ ರಸ್ತೆಯನ್ನು ಅಲ್ಲಿನ ಪರಿಸರ ಸಚಿವ ಸೆಗೊಲೆನ್ ರಾಯಲ್ ಇತ್ತೀಚೆಗೆ ಉದ್ಘಾಟಿಸಿದರು.

ಈ ರಸ್ತೆಯು ಪ್ರತಿ ದಿನ ಅದರಲ್ಲಿ  ಸಾಗುವ ಸುಮಾರು 2000 ವಾಹನಗಳ ಭಾರವನ್ನು ಹೊರುವ ಸಾಮಥ್ರ್ಯ ಹೊಂದುವ ಸಲುವಾಗಿ ಈ ಸೋಲಾರ್ ಪ್ಯಾನೆಲ್ಲುಗಳನ್ನು  ರೆಸಿನ್ ಒಂದರಲ್ಲಿ ಮಚ್ಚಲಾಗಿದ್ದು ಇದರಲ್ಲಿ  ತೆಳುವಾದ ಸಿಲಿಕಾನ್ ಶೀಟುಗಳಿದ್ದು ಇವು ವಾಹನಗಳ ಭಾರವು ಸೋಲಾರ್ ಪ್ಯಾನೆಲ್ಲುಗಳ ಮೇಲೆ ಬೀಳದಂತೆ ತಡೆಯುವುದಲ್ಲದೆ ವಾಹನದ ಚಕ್ರಗಳಿಗೆ ರಸ್ತೆಯ ಮೇಲೆ ಒಳ್ಳೆಯ ಹಿಡಿತವಿರುವಂತೆ ನೋಡಿಕೊಳ್ಳುವುದು.

ವಾಟ್ ವೇ ಎಂಬ ಹೆಸರಿನ ಈ ತಂತ್ರಜ್ಞಾನ ಉಪಯೋಗಿಸಿ  3,400 ಜನಸಂಖ್ಯೆಯ  ಈ ಗ್ರಾಮದ ಬೀದಿ ದೀಪಗಳಿಗೆ ಸಾಕಷ್ಟು ವಿದ್ಯುತ್ ಉತ್ಪಾದಿಸುವುದು ಸಾಧ್ಯವೇ ಎಂದು ಕಂಡುಕೊಳ್ಳಲು ಅಧಕಾರಿಗಳು ಪ್ರಯತ್ನಿಸಲಿದ್ದಾರೆÀ.

ಈ ಯೋಜನೆ ಯಶಸ್ವಿಗೊಂಡಿದ್ದೇ ಆದಲ್ಲಿ ಪ್ರತಿ 1000 ಕಿ ಮೀ.ಗಳಿಗೆ ಒಂದು ಕಿ ಮೀ ಇಂತಹ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅಲ್ಲಿನ ಪರಿಸರ ಸಚಿವರು ಹೇಳಿದ್ದಾರೆ.

ಇಂತಹದೇ ಒಂದು ಯೋಜನೆಯನ್ನು ಅಂಸ್ಟರ್ಡೆಮ್ ನಗರದಲ್ಲಿ 2014ರಲ್ಲಿಯೇ ಆರಂಭಿಸಲಾಗಿತ್ತಾದರೂ ಅಲ್ಲಿ ಸೋಲಾರ್ ಪ್ಯಾನೆಲ್ಲುಗಳನ್ನು ಸೈಕಲ್ ಟ್ರ್ಯಾಕಿನಲ್ಲಿ ಅಳವಡಿಸಲಾಗಿತ್ತು.