ಅಸಹಾಯಕ ಮಹಿಳೆಯ ಪತಿಯ ಶವಸಂಸ್ಕಾರ ನಡೆಸಿದ ಉಡುಪಿ ಸಾಮಾಜಿಕ ಕಾರ್ಯಕರ್ತರು

ಉಡುಪಿ : ಉಡುಪಿಯ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ವಲಸೆ ಕಾರ್ಮಿಕೆ, ಅಸಾಯಕ ಮಹಿಳೆಯ ಪತಿಯ ಶವಸಂಸ್ಕಾರ ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಮಿತ್ರರ ಸಹಕಾರದಿಂದ ನೆರವೇರಿಸಿದರು. ವಿಶು ಅವರು  ಅಪರಿಚಿತರ, ನಿರ್ಗತಿಕರ, ಅಸಾಹಯಕ ಕುಟುಂಬದವರ ಬಹಳಷ್ಟು ಶವ ಸಂಸ್ಕಾರವನ್ನು ವಿದ್ಯಾರ್ಥಿ ಜೀವನದಿಂದ ಇದುವರೆಗೆ ನಡೆಸಿಕೊಂಡು ಬಂದಿದ್ದಾರೆ.

ನಾಗಪ್ಪ (55) ಉತ್ತರ ಕರ್ನಾಟಕ ಮೂಲದ ದಲಿತ ಸಮಾಜದ ವ್ಯಕ್ತಿ. ಆತ ತನ್ನ ಹೆಂಡತಿಯೊಂದಿಗೆ ಉಡುಪಿಗೆ ವಲಸೆ ಬಂದು, ಆದಿ ಉಡುಪಿ ಪಂದುಬೆಟ್ಟುವಿನಲ್ಲಿ ಖಾಸಗಿಯವರ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಪರಿಸರದ ಸುತ್ತ ಮುತ್ತ ಕೂಲಿ ಮಾಡಿಕೊಂಡು ಕಳೆದ 20 ವರ್ಷಗಳಿಂದ ಬದುಕು ಸಾಗಿಸುತ್ತಿದ್ದರು. ಹಿಗೀರುವಾಗ ನಾಗಪ್ಪ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದ. ಹೆಂಡತಿ ಮಾಯವ್ವ ಆತನ ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಳು. ರೋಗ ಉಲ್ಬಣಗೊಂಡ ಕಾರಣ ನಾಗಪ್ಪ ಚಿಕಿತ್ಸೆ ಫಲಕಾರಿಯಾಗದೆ ಎ 6ರಂದು ಮೃತಪಟ್ಟರು.

ಏಕಾಂಗಿಯಾಗಿ ಮಾಯವ್ವ ಶಿವಮೊಗ್ಗದಿಂದ ಗಂಡನ ಶವವನ್ನು ಅಂಬುಲೆನ್ಸ್ ಮುಖಾಂತರ ನಡು ರಾತ್ರಿಯಲ್ಲಿ ಉಡುಪಿಗೆ ತಂದು, ಅಸಾಹಯಕಳಾಗಿ ಶವಸಂಸ್ಕಾರ ನಡೆಸಲು ಸಮಾಜಸೇವಕ ವಿಶು ಶೆಟ್ಟಿ ಅವರಲ್ಲಿ ವಿನಂತಿಸಿ ಕೊಂಡಳು. ವಿಶು ಅವರು ಆ ಸಮಯ ಮಧÀ್ಯರಾತ್ರಿಯಾದರಿಂದ ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇಡುವ ವ್ಯವಸ್ಥೆಗೊಳಿಸಿದರು.

ಮಾಯವ್ವಳಿಗೆ ತನ್ನವರೆಂದು ಹೇಳಿ ಕೊಳ್ಳುವವರು ಯಾರು ಇಲ್ಲದರಿಂದ ಶವಸಂಸ್ಕಾರದ ಮುಂದಾಳತ್ವ ವಿಶು ವಹಿಸಿಕೊಂಡು, ಎ 7 ಶುಕ್ರವಾರ ಹಿಂದೂ ಸಂಪ್ರದಾಯದಂತೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಶವಸಂಸ್ಕಾರ ನಡೆಸಲಾಯಿತು.

ಶವಸಂಸ್ಕಾರದ ಕಾರ್ಯಕ್ಕೆ ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಶಿರೂರು, ಕುಂದಾಪುರ ನಮ್ಮ ಭೂಮಿ ಸಂಸ್ಥೆಯ ಮೇಲ್ವಿಚಾರಕ ಚನ್ನವೀರಪ್ಪ, ವಲಸೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸಂಗಪ್ಪ  ಭಾಗಿಗಳಾದರು. ಶವಸಂಸ್ಕಾರದ ಖರ್ಚು ವೆಚ್ಚಗಳನ್ನು ಏಲ್ಲರು ಸೇರಿ ಭರಿಸಿದರು.