`ರಿಯಲ್ ಎಸ್ಟೇಟ್ ವ್ಯಾಪಾರ ಇಳಿಕೆ’

 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವ್ಯಾಪಾರ ನಡೆಯುತ್ತಿದೆ ಆದರೆ ವ್ಯಾಪಾರದ ಪ್ರಮಾಣ ಕಡಿಮೆ ಎಂದು ಮಂಗಳೂರು ಇಂಡಿಯನ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಎಸೋಸಿಯೇಷನ್ ಒಕ್ಕೂಟದ (ಕ್ರೆಡಯಿ) ಅಧ್ಯಕ್ಷ ಡಿ ಬಿ ಮೆಹ್ತಾ ಹೇಳಿದರು.

ನೋಟು ಅಮಾನ್ಯದ ಬಳಿಕ ಮನೆ ಮತ್ತು ಅಪಾಟ್ರ್ಮೆಂಟ್ ದರ ಕುಸಿತಗೊಂಡಿದೆ. ಅದೇ ರೀತಿ ಗ್ರಾಹಕರ ಸಂಖ್ಯೆಯೂ ಇಳಿಕೆಯಾಗಿದೆ. ಜನವರಿ ಆರಂಭದಿಂದ ಇದುವರೆಗೆ ಕೇವಲ 2 ಅಪಾಟ್ರ್ಮೆಂಟ್ ಮಾರಾಟವಾಗಿದೆ, ಅದರಲ್ಲಿ ಒಂದು ಹಳೆ ಪ್ರಾಜೆಕ್ಟ್ ಇನ್ನೊಂದು ಹೊಸತು. ನೋಟು ಅಮಾನ್ಯ ಪೂರ್ವದ ದರಕ್ಕಿಂತ ಶೇಕಡಾ 5ರಷ್ಟು ಕಡಿಮೆ ದರದಲ್ಲಿ ಮಾರಾಟವಾಗಿದೆ. ಗ್ರಾಹಕರು ನಿರೀಕ್ಷಿಸಿದಷ್ಟು ಕಡಿಮೆ ಬೆಲೆ ಮಾರಾಟದಲ್ಲಿ ಪಡೆಯುವುದು ಸಾಧ್ಯವಿಲ್ಲ. ಪ್ರತಿ ವಸ್ತುಗಳು ವಿವಿಧ ದರಗಳನ್ನು ಹೊಂದಿರುತ್ತವೆ ಮತ್ತು ದರಗಳು ಇಳಿಕೆಯಾಗುವುದಿಲ್ಲ. ಆದರೆ ಖರೀದಿಯಲ್ಲಿ ಇಳಿಕೆಯಾಗುತ್ತದೆ ಎಂದು ಗ್ರಾಹಕರು ಅರ್ಥೈಸಿಕೊಳ್ಳಬೇಕು” ಎಂದು ಮೆಹ್ತಾ ಹೇಳಿದರು.

ಮುಂಬರುವ ಬಜೆಟ್ ಗೃಹನಿರ್ಮಾಣ ವಲಯಕ್ಕೆ ದೊಡ್ಡ ಉತ್ತೇಜನ ನೀಡಲಿದೆ ಮತ್ತು ಈಗಾಗಲೇ ಮನೆ ಸಾಲಗಳ ಬಡ್ಡಿ ಇಳಿಕೆಯಾಗಿದೆ. ಒಂದು ಬ್ಯಾಂಕ್ ಗ್ರಾಹಕರಿಗೆ ಶೇಕಡಾ 8.35 ಬಡ್ಡಿದರದಲ್ಲಿ ಮನೆ ಸಾಲ ಕೊಡುಗೆ ಘೋಷಿಸಿದೆ.

“ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಗ್ರಾಹಕರ ಸಂಖ್ಯೆ ಇಳಿಕೆಯಾಗಿದೆ. ಜನರ ಕಾದು ನೋಡುವಿಕೆಯ ಸ್ಥಿತಿಯಲ್ಲಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಅಷ್ಟು ದೊಡ್ಡ ಮಟ್ಟಿನ ರಿಯಾಯಿತಿ ದರ ದೊರೆಯಲಾರದು ಎಂಬುದನ್ನು ಗ್ರಾಹಕರು ಅರ್ಥೈಸಿಕೊಂಡಿದ್ದಾರೆ” ಎಂದು ಮೆಹ್ತಾ ಹೇಳಿದರು.