ಐಎಎಸ್ ಅಧಿಕಾರಿ ತಿವಾರಿ ಸಾವು ಪ್ರಕರಣ ಎಸೈಟಿಗೆ

ಸಾಂದರ್ಭಿಕ ಚಿತ್ರ

ಲಕ್ನೌ : ಐಎಎಸ್ ಅಧಿಕಾರಿ ಅನುರಾಗ್ ತವೇರಿ ನಿಗೂಢ ಸಾವು ಪ್ರಕರಣವನ್ನು 5 ಮಂದಿ ಸದಸ್ಯರಿಂದ ರಚಿತವಾದ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಲಾಗಿದೆ.

2007 ಬ್ಯಾಚ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಅನುರಾಗ್ ತವೇರಿ ದೇಹ ಬುಧವಾರ ಬೆಳಿಗ್ಗೆ ಲಕ್ನೌ ಕೇಂದ್ರ ಭಾಗದ ಮೀರಾ ಬಾಯಿ ಸ್ಟೇಟ್ ಗೆಸ್ಟ್ ಹೌಸಿನ ಸಮೀಪ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತವೇರಿ ಕುಟುಂಬಿಕರು ಇದೊಂದು ಕೊಲೆ ಎಂದು ಬಲವಾಗಿ ಆರೋಪಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎಸೈಟಿಗೆ ಒಪ್ಪಿಸಲಾಗಿದೆ.

“ಹಜಾರತ್ಗಂಜ್ ಸರ್ಕಲ್ ಅಧಿಕಾರಿ ಮುಖಂಡತ್ವದಲ್ಲಿರುವ 5 ಮಂದಿ ಸದಸ್ಯರ ಎಸೈಟಿ ತಂಡವನ್ನು ಗುರುವಾರ ರಚಿಸಲಾಗಿದೆ. ಎಸೈಟಿ ತನ್ನ ವರದಿಯನ್ನು 72 ಗಂಟೆಗಳೊಳಗೆ ಒಪ್ಪಿಸಲಿದೆ” ಎಂದು ಹಿರಿಯ ಪೊಲೀಸ್ ಸುಪರಿಂಟೆಂಡೆಂಟ್ ದೀಪಕಕುಮಾರ್ ಹೇಳಿದ್ದಾರೆ.

ಅನುರಾಗ್ ತವೇರಿ 36ನೇ ಹುಟ್ಟುಹಬ್ಬವನ್ನಾಚರಿಸಿದ್ದು, ಕುಟುಂಬದವರು ಹೇಳುವ ಪ್ರಕಾರ ತವೇರಿ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಲ್ಲ. ಅವರ ಪ್ರಾಮಾಣಿಕತೆಯೇ ಮುಳುವಾಯಿತು. ಭ್ರಷ್ಟ ಅಧಿಕಾರಿಗಳು ತವೇರಿಯನ್ನು ಕೊಲೆ ಮಾಡಿರಬೇಕು ಎಂದು ಆರೋಪಿಸಿದ್ದಾರೆ. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಆದರೆ ಉಸಿರುಗಟ್ಟಲು ನಿಖರವಾದ ಕಾರಣ ಏನು ಎಂಬುದರ ಬಗ್ಗೆ ವರದಿಯಲ್ಲಿ ಸ್ಪಷ್ಟತೆ ಇಲ್ಲ. ಇನ್ನೊಂದು ಮೂಲಗಳ ಪ್ರಕಾರ ತವೇರಿ ಪತ್ನಿಯಿಂದ ದೂರವಾದ ಬಳಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದೆ.