ಏಕಕಾಲದಲ್ಲಿ ಚುನಾವಣೆ ಪ್ರಜಾಪ್ರಭುತ್ವಕ್ಕೆ ಮಾರಕ

ಏಕಕಾಲದಲ್ಲಿ ಎರಡು ಚುನಾವಣೆಗಳನ್ನು ನಡೆಸಿದರೆ ಪ್ರಜಾಪ್ರಭುತ್ವದ ಆಶಯವನ್ನೇ ಕೊಂದಂತಾಗುವುದು. ಅದಕ್ಕೆ ಕಾರಣಗಳು ಇಲ್ಲಿವೆ.

  • ನಿಯಮಿತವಾಗಿ ಚುನಾವಣೆ ನಡೆಯುವುದೇ ಪ್ರಜಾಪ್ರಭುತ್ವ ದೇಶದ ಒಂದು ಉತ್ತಮ ಲಕ್ಷಣ. ಪ್ರತಿ ಚುನಾವಣೆಯೂ ಮತದಾರನನ್ನು ಹೆಚ್ಚು ಪ್ರಬುದ್ಧಗೊಳಿಸುತ್ತದೆ.
  • ಹೆಚ್ಚು ಚುನಾವಣೆಗಳೆಂದರೆ ಹೆಚ್ಚು ಪ್ರಬುದ್ಧ ಮತದಾರರು. ಅವರನ್ನು ಭಾವನಾತ್ಮಕವಾಗಿ ಮೋಸಗೊಳಿಸುವುದು ಅಥವಾ ಅವರ ಮೇಲೆ ಪ್ರಭಾವ ಬೀರುವುದು ಅಸಾಧ್ಯ.
  • ಪ್ರತಿ ಚುನಾವಣೆಯಲ್ಲೂ ಸಾವಿರಾರು ಹೊಸ ಮತದಾರರು ಪ್ರಥಮ ಬಾರಿಗೆ ತಮ್ಮ ಮತ ಚಲಾಯಿಸುವ ಅಧಿಕಾರ ಪಡೆಯುತ್ತಾರೆ. ಒಂದು ವೇಳೆ ಇಂತಹ ಮೊದಲ ಬಾರಿಯ ಮತದಾರರು ಯಾವುದೋ ಆಮಿಷಕ್ಕೆ ತುತ್ತಾಗಿದ್ದರೆ ಇಲ್ಲವೇ ಸುಳ್ಳು ಪ್ರಚಾರ ಕಾರ್ಯಕ್ಕೆ ಬಲಿ ಬಿದ್ದಿದ್ದೇ ಆದಲ್ಲಿ ಹಾಗೂ ಇಂತಹ ಸಂದರ್ಭ ಏಕಕಾಲದಲ್ಲಿ ಚುನಾವಣೆ ನಡೆದಿದ್ದೇ ಆದಲ್ಲಿ ಅವರನ್ನು ಒಂದಕ್ಕಿಂತ ಹೆಚ್ಚು ಬಾರಿ ತಪ್ಪು ದಾರಿಗೆಳೆದಂತಾಗುವುದು.
  • ವಿಧಾನಸಭಾ, ಲೋಕಸಭಾ ಚುನಾವಣೆಗಳು ಪ್ರತ್ಯೇಕವಾಗಿ ನಡೆದಿದ್ದೇ ಆದಲ್ಲಿ ಜನರಿಗೆ ಒಂದು ಸರಕಾರದ ಕಾರ್ಯವೈಖರಿಯನ್ನು ಅವಲೋಕಿಸಿ ಆ ಸರಕಾರ ನಡೆಸುವ ಪಕ್ಷಕ್ಕೆ ಮತ ಚಲಾಯಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವ ಅವಕಾಶ ದೊರೆಯುವುದು.
  • ಚುನಾವಣೆಗಳು ಏಕಕಾಲದಲ್ಲಿ ನಡೆದರೆ ಬೊಕ್ಕಸದ ಮೇಲಿನ ಹೊರೆ ಕಡಿಮೆಯಾಗುವುದೆಂಬುದು ಸಂಪೂರ್ಣ ಸತ್ಯವಲ್ಲ.
  • ಏಕಕಾಲದಲ್ಲಿ ಚುನಾವಣೆ ನಡೆದರೆ ಪಕ್ಷಗಳು, ರಾಜಕಾರಣಿಗಳಿಗೆ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗುವುದು.
  • ಅಂತಿಮವಾಗಿ ಜನರು ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನೇ ಕಳೆದುಕೊಳ್ಳುವಂತಾಗುವುದು.