ಸರಳತೆಯತ್ತ ಸ್ಯಾಂಡಲ್ವುಡ್ ಹೀರೋಗಳು

ಇಷ್ಟು ಸಮಯ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದ ಒಬ್ಬೊಬ್ಬರೇ ಹೀರೋಗಳು ಈಗ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವತ್ತ ಮನಸ್ಸು ಮಾಡುತ್ತಿದ್ದಾರೆ. ಕಳೆದ ವಾರವಷ್ಟೇ ಸುದೀಪ್ ತನ್ನ ಬರ್ತಡೇಯನ್ನು ಆಚರಿಸಬೇಡಿ. ಅದರ ಬದಲು ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಮಾಡಿ ಎಂದು ಕರೆಯಿತ್ತು ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದು ಗೊತ್ತೇ ಇದೆ. ಈಗ ರಿಯಲ್ ಸ್ಟಾರ್ ಖ್ಯಾತಿಯ ಉಪೇಂದ್ರ ಕೂಡಾ ಅದೇ ದಾರಿ ತುಳಿಯುತ್ತಿದ್ದಾನೆ.

ಉಪೇಂದ್ರನಿಗೆ ಇದೇ ತಿಂಗಳು 18ನೇ ತಾರೀಕಿಗೆ 50 ವರ್ಷ ತುಂಬಲಿದ್ದು ಆ ದಿನ ಹೂ-ಮಾಲೆ, ಕೇಕ್, ಬ್ಯಾನರ್ ಹಾಗೂ ಫ್ಲೆಕ್ಸ್‍ಗಳಿಗೆ ಹಣ ಖರ್ಚು ಮಾಡಬೇಡಿ ಎಂದು ಅಭಿಮಾನಿಗಳಿಗೆ ಉಪ್ಪಿ ಕರೆ ನೀಡಿದ್ದಾನೆ. ಅದರ ಬದಲು ನೇರವಾಗಿ ತನ್ನನ್ನು ಭೇಟಿ ಮಾಡಿ ವಿಶ್ ಮಾಡಿದರೆ ಸಾಕು ಎಂದಿದ್ದಾನೆ. ಈಗಾಗಲೇ `ಪ್ರಜಾಕೀಯ’ ಎನ್ನುವ ಪಕ್ಷಕ್ಕೆ ಚಾಲನೆ ನೀಡಿರುವ ಉಪೇಂದ್ರ ಆ ಬಗ್ಗೆ ಈಗಾಗಲೇ ಹವಾ ಎಬ್ಬಿಸುತ್ತಿದ್ದು ಈ ಹುಟ್ಟುಹಬ್ಬದ ಸಮಯದಲ್ಲಿ ಮತ್ತಿಷ್ಟು ಜನರನ್ನು ತನ್ನತ್ತ ಸೆಳೆಯುವ ನಿರೀಕ್ಷೆಯಲ್ಲಿದ್ದಾನೆ.