ಅಮೆರಿಕದಲ್ಲಿ `ಕೃಪಾಣ’ ಧರಿಸಿದ್ದ ಸಿಖ್ ವ್ಯಕ್ತಿ ಸೆರೆ

ವಾಷಿಂಗ್ಟನ್ : ಹುಟ್ಟುವಾಗ ಜಸ್ಟಿನ್ ಸ್ಮಿತ್ ಆಗಿದ್ದು, ಒಂಬತ್ತು ವರ್ಷಗಳ ಹಿಂದೆ ಸಿಖ್ ಧರ್ಮಕ್ಕೆ ಮತಾಂತರಗೊಂಡಿರುವ ಹರ್ಪಿತ್ ಸಿಂಗ್ ಕೌಸ್ಲನನ್ನು (33) ತನ್ನ ಬಳಿ ಧರ್ಮಕ್ಕೆ ಸಂಬಂಧಿಸಿದ ಚೂರಿ (ಕೃಪಾಣ) ಇಟ್ಟುಕೊಂಡಿರುವ ಆರೋಪದಲ್ಲಿ ಅಮೆರಿಕ ಪೊಲೀಸರು ಬಂಧಿಸಿದ್ದಾರೆ. ಸಿಂಗ್ ಬಗ್ಗೆ ಸಂಶಯಗೊಂಡ ಕಿರಾಣಿ ಅಂಗಡಿಯ ಗಿರಾಕಿಯೊಬ್ಬ ನೀಡಿದ ಮಾಹಿತಿಯಂತೆ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ.