ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ನಾಳೆ ಸಹಿ

ಸಂಗ್ರಹಣಾ ಅಭಿಯಾನ

ಜೋಯಿಡಾ : ಕಸ್ತೂರಿರಂಗನ್ ವರದಿ ಯಥಾವತ್ ಜಾರಿ ವಿರೋಧಿಸಿ ಜೋಯಿಡಾದಲ್ಲಿ ಎಪ್ರಿಲ್ 12ರಂದು ಕಾಳಿ ಬ್ರಿಗೇಡ್ ವತಿಯಿಂದ ಬೃಹತ್ ಸಹಿ ಸಂಗ್ರಹಣಾ ಅಭಿಯಾನ ನಡೆಯಲಿದೆ ಎಂದು ಕಾಳಿ ಬ್ರಿಗೇಡ್ ಅಧ್ಯಕ್ಷ ರವಿ ರೆಡ್ಕರ್ ತಿಳಿಸಿದ್ದಾರೆ. “ತಾಲೂಕಿನಲ್ಲಿ ಎ 20ರ ವರೆಗೆ ಸುಮಾರು 10,000 ಸಹಿ ಸಂಗ್ರಹಿಸಲಾಗುವುದು. ಎ 24ರಂದು ಜೋಯಿಡಾ ತಾಲೂಕನ್ನು ಬಂದ್ ಮಾಡುವ ಮೂಲಕ ಕಸ್ತೂರಿರಂಗನ್ ವರದಿ ಯಥಾವತ್ ಜಾರಿಯನ್ನು ವಿರೋಧಿಸಿ ವ್ಯಾಪಾರ ವಹಿವಾಟು ಬಂದ್ ಮಾಡಿ ರಸ್ತೆ ತಡೆ ನಡೆಸಲಾಗುವುದು. ಎ 25ರಂದು ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಕಸ್ತೂರಿರಂಗನ್ ವರದಿ ಯಥಾವತ್ ಜಾರಿ ವಿರೋಧಿಸಿ ದೆಹಲಿಯಲ್ಲಿ ಈ ಸಂಬಂಧಪಟ್ಟ ಇಲಾಖೆ ಮತ್ತು ಸಚಿವರಿಗೆ ಆಕ್ಷೇಪಣೆ ಸಲ್ಲಿಸಲಾಗುವುದು” ಎಂದು ತಿಳಿಸಿದ್ದಾರೆ.