ಕ್ಯಾ ವಿಕ್ರಮ್ ಭಾತ್ರಾ ಪಾತ್ರದಲ್ಲಿ ಸಿದ್

`ಜಂಟಲ್ ಮ್ಯಾನ್’ ಸಿದ್ಧಾರ್ಥ್ ಮಲ್ಹೋತ್ರಾ ಈಗ ಇನ್ನೊಂದು ಸಿನಿಮಾಗೆ ತಯಾರಾಗುತ್ತಿದ್ದಾನೆ. ಈ ಬಾರಿ ಸಿದ್ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಕ್ಯಾಪ್ಟನ್ ವಿಕ್ರಮ್ ಭಾತ್ರಾ ಪಾತ್ರದಲ್ಲಿ ನಟಿಸಲಿದ್ದಾನೆ.

ಸಿದ್ ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಇಷ್ಟಪಟ್ಟಿದ್ದು ಚಿತ್ರದಲ್ಲಿ ನಟಿಸಲು ಓಕೆ ಸಿಗ್ನಲ್ ನೀಡಿದ್ದಾನೆ ಎನ್ನಲಾಗಿದೆ. ಸಿದ್ಧಾರ್ಥನ ಅಜ್ಜ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಆತನಿಗೆ ಅಲ್ಲಿ ಕೆಲಸ ಮಾಡುವವರ ಬಗ್ಗೆ ಭಾರೀ ಅಭಿಮಾನವಿರುವುದು ಮಾತ್ರವಲ್ಲ ಯಾವ ಒತ್ತಡದಲ್ಲಿ ಅವರು ಕೆಲಸ ಮಾಡುತ್ತಾರೆ ಎನ್ನುವುದರ ಬಗ್ಗೆ ಮಾಹಿತಿಯೂ ಇದೆ. ಅದಲ್ಲದೇ ಕ್ಯಾಪ್ಟನ್ ವಿಕ್ರಮರಂತಹ ಸ್ಪೂರ್ತಿದಾಯಕ ಮಹಾನ್ ವ್ಯಕ್ತಿಯ ಜೀವನಾಧರಿತ ಚಿತ್ರದಲ್ಲಿ ನಟಿಸುವ ಅವಕಾಶ ಸಿಗುತ್ತಿರುವ ಬಗ್ಗೆಯೂ ಸಿದ್ ಎಕ್ಸೈಟ್ ಆಗಿದ್ದಾನೆ ಎನ್ನಲಾಗಿದೆ. ವಿಕ್ರಮ್ ಅವರಿಗೆ ವಿಶಾಲ್ ಎನ್ನುವ ಅವಳಿ ಸಹೋದರನಿದ್ದು ಸಿನಿಮಾದಲ್ಲಿ ಆ ಪಾತ್ರವನ್ನೂ ಸಿದ್ಧಾರ್ಥ್ ಮಾಡಲಿದ್ದಾನೆಯಂತೆ. ಸಿದ್ ಈಗ ವಿಕ್ರಮ್ ಅವರ ಜೀವನದ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದರಲ್ಲಿ ನಿರತನಾಗಿದ್ದಾನೆ.