ದೇವು `ನೀಚ’ ಹೇಳಿಕೆಗೆ ಸಿದ್ರಾಮಯ್ಯ ತಿರುಗೇಟು

Deve Gowda

ಬೆಂಗಳೂರು :  ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ತನಗೆ ಮಾತನಾಡಲು ಅವಕಾಶ ನೀಡದೇ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು `ನೀಚ’ ಎಂದು ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸಂಬೋಧಿಸಿದ್ದರೆ, ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ತಾನು ಈ ಮಾತನ್ನು ಅವಮಾನವೆಂದು ಪರಿಗಣಿಸದೆ ಗೌರವದ ಪದಕವೆಂದು ಸ್ವೀಕರಿಸುತ್ತೇನೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಯಾರನ್ನೂ ಹೆಸರಿಸದೆ ಟ್ವೀಟ್ ಮಾಡಿದ ಸಿದ್ದರಾಮಯ್ಯ “ದಲಿತರ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ನೀವು ಹೊರಾಡುವಾಗ ಪ್ರಬಲ ವ್ಯಕ್ತಿಗಳು ಕಳವಳಗೊಂಡು ನಿಮ್ಮನ್ನು ಅವಮಾನಿಸಬಹುದು, ಆದರೂ ಬಗ್ಗದೇ ಇದ್ದಾಗ ನಿಮ್ಮನ್ನು ನಿಂದಿಸಬಹುದು. ಇವುಗಳನ್ನು ಅವಮಾನವೆಂದು ಪರಿಗಣಿಸದೆ ಗೌರವದ ಪದಕಗಳು ಎಂದು  ಪರಿಗಣಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಟ್ವೀಟಿನಲ್ಲಿ “ಸಂಸ್ಕøತಿ ಒಬ್ಬರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಇದರಲ್ಲಿ ಹಿರಿಯರು-ಕಿರಿಯರು ಎಂಬ ಬೇಧಭಾವವಿಲ್ಲ” ಎಂದರು.

 

LEAVE A REPLY