ಇಂದು ಸೀಎಂ ನಿಯೋಗ ದಿಲ್ಲಿಯಲ್ಲಿ ರಾಹುಲ್ ಭೇಟಿ

 ಬೆಂಗಳೂರು : 2018ರ ಅಸೆಂಬ್ಲಿ ಚುನಾವಣೆ ಸಿದ್ಧತೆ ವಿಷಯದಲ್ಲಿ ಮಾತುಕತೆ ನಡೆಸಲು ಇಂದು ಸೀಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ನೇತೃತ್ವದ ಮುಖಂಡರ ತಂಡವೊಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ದಿಲ್ಲಿಯಲ್ಲಿ ಭೇಟಿಯಾಗಲಿದೆ. ರಾಜ್ಯದಲ್ಲಿ ಮನೆಮನೆಗೆ ಕಾಂಗ್ರೆಸ್ ಭೇಟಿ ಅಭಿಯಾನಕ್ಕೆ ಅಷ್ಟೇನೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಪಕ್ಷೀಯರು ಕಾವೇರಿದ ಸ್ಥಿತಿ ಎದುರಿಸುವಂತಾಗಿದೆ. ಬೆಂಗಳೂರಿನಲ್ಲಿ ಎಐಸಿಸಿ ಅಧಿವೇಶನ ನಡೆಸುವ ಪ್ರಸ್ತಾವದ ಕುರಿತು ಸೀಎಂ ನಿಯೋಗ ರಾಹುಲ್ ಜೊತೆ ಸಮಾಲೋಚಿಸಲಿದೆ. ಜೊತೆಗೆ ಕೇಂದ್ರದ ಸಚಿವರನ್ನು ಸೀಎಂ ಭೇಟಿಯಾಗಿ ಚರ್ಚಿಸಲಿದ್ದಾರೆ.