ಕಿರಿಕ್ ಪಾರ್ಟಿ ಹಿಂದಿ ರೀಮೇಕಿನಲ್ಲಿ ಸಿದ್ದಾರ್ಥ್

ರಕ್ಷಿತ್ ಶೆಟ್ಟಿ, ರಷ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ ಮುಖ್ಯ ಪಾತ್ರದಲ್ಲಿ ನಟಿಸಿದ್ದ 2016ರ ಡಿಸೆಂಬರಿನಲ್ಲಿ ತೆರೆಕಂಡ `ಕಿರಿಕ್ ಪಾರ್ಟಿ’ ಸಿನಿಮಾ ಸೂಪರ್ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ರಿಶಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ ಈ ಸಿನಿಮಾ ಬಾಕ್ಸಾಫೀಸಿನಲ್ಲಿ 50 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಕಲೆಕ್ಷನ್ ಮಾಡಿದೆ. ಈಗಾಗಲೇ ಈ ಚಿತ್ರ ತೆಲುಗಿನಲ್ಲಿ ರೀಮೇಕ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಹಿಂದಿಯಲ್ಲೂ ಈ ಚಿತ್ರ ಬರಲಿದೆ. ಮೂಲದ ಪ್ರಕಾರ ರಕ್ಷಿತ್ ಮಾಡಿದ್ದ ಪಾತ್ರವನ್ನು ಹಿಂದಿ ಅವತರಣಿಕೆಯಲ್ಲಿ ಸಿದ್ದಾರ್ಥ್ ಮಲ್ಹೋತ್ರ ನಿರ್ವಹಿಸಲಿದ್ದಾನೆ.

ನಿರ್ಮಾಪಕ ಅಜಯ್ ಕಪೂರ್ ಹಿಂದಿ ಅವತರಣಿಕೆಯ ಕುರಿತು ಈಗ ಭಾರೀ ಗಮನ ಹರಿಸಿದ್ದು ಚಿತ್ರದ ಆಕ್ಟರ್ಸ್ ಹಾಗೂ ಉಳಿದ ತಂತ್ರಜ್ಞರ ಆಯ್ಕೆಯ ಪ್ರಕ್ರಿಯೆಯಲ್ಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗೆ ಆಕ್ಷನ್ ಕಟ್ ಯಾರು ಹೇಳುತ್ತಾರೆ, ನಾಯಕಿಯರು ಯಾರು ಎನ್ನುವ ವಿಷಯ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

 

 

LEAVE A REPLY