ಅಸೌಖ್ಯದಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು ಸಾವು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಅಸೌಖ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಂಬ್ರಾಣ ಅಂಡಿತ್ತಡ್ಕ ನಿವಾಸಿ ದಿ ರಾಮ ಎಂಬವರ ಪುತ್ರ ನಾರಾಯಣ (40) ಮೃತ ವ್ಯಕ್ತಿ. ಇವರ ಶವ ಶುಕ್ರವಾರ ಮುಂಜಾನೆ ಕಿದೂರು ಕುಂಟಂಗೇರಡ್ಕದಲ್ಲಿರುವ ಪತ್ನಿ ಮನೆಯೊಳಗೆ ಬೆಡ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಕೂಲಿ ಕಾರ್ಮಿಕನಾದ ನಾರಾಯಣ ಅಲ್ಪ ಕಾಲದಿಂದ ಹೃದಯ ಸಂಬಂಧ ಅಸೌಖ್ಯದಿಂದ  ಬಳಲುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.