ಜಿಮ್ ಟ್ರೈನರ್ ಆಗಿ ಶ್ವೇತಾ ಶ್ರೀವಾತ್ಸವ್

`ಸಿಂಪಲಾಗ್ ಒಂದ್ ಲವ್ ಸ್ಟೋರಿ’ ಮೂಲಕ ಫೇಮಸ್ ಆದ ಶ್ವೇತಾ ಶ್ರೀವಾತ್ಸವ ಈಗ ಮತ್ತೆ ಸಿನಿರಂಗಕ್ಕೆ ಮರಳುತ್ತಿದ್ದಾಳೆ. ಆಕೆ ಮದುವೆಯಾಗಿ ಮಗು ಮಾಡಿಕೊಂಡು ಈಗ ಮತ್ತೆ ಕಮ್ ಬ್ಯಾಕ್ ಆಗಲು ಸಿದ್ಧಳಾಗಿದ್ದಾಳೆ.

ಮಗು ಆದರೂ ಬೇಡಿಕೆ ಇನ್ನೂ ಉಳಿಸಿಕೊಂಡಿರುವ  ಶ್ವೇತಾ ಈಗ ಎರಡೆರಡು ಸಿನಿಮಾಗಳಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾಳೆ. ಅದರಲ್ಲಿ ಒಂದು ಚಿತ್ರದಲ್ಲಿ ಆಕೆಗೆ ಜಿಮ್ ಹಾಗೂ ಯೋಗ ಟ್ರೈನರ್ ಪಾತ್ರವಾಗಿದ್ದು ಶ್ವೇತಾ ಈ ಪಾತ್ರಕ್ಕಾಗಿ ಈಗ ಸ್ಲಿಮ್ ಆಂಡ್ ಟ್ರಿಮ್ ಆಗಿದ್ದಾಳೆ. ಉಳಿದ ಚಿತ್ರದ ಮಾಹಿತಿಯನ್ನು ಆಕೆ ಬಿಟ್ಟುಕೊಟ್ಟಿಲ್ಲ. ಸದ್ಯವೇ ಎರಡೂ ಚಿತ್ರಗಳು ಸೆಟ್ಟೇರುವ ಸಾಧ್ಯತೆ ಇದೆ.

LEAVE A REPLY