`ಆರ್‍ಜಿವಿ’ಗೆ ಶುಭಾ ಐಟೆಂ

ಕಳೆದ ತಿಂಗಳು ಗೀತರಚನೆಕಾರ ಕಂ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿದ್ದಾಳೆ ಕೊನೆಗೆ ಅದು ಬರೀ ಸಿನಿಮಾವೊಂದರ ಶೂಟಿಂಗ್ ಎಂದೆಲ್ಲ ಜೋರಾಗಿ ಹೆಡ್ ಲೈನ್ ಅಲಂಕರಿಸಿದ್ದ ಶುಭಾ ಪೂಂಜಾ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ.
ಈ ಬಾರಿಯ ಸುದ್ದಿಯೆಂದರೆ ಶುಭಾ ಪೂಂಜಾ ಈಗ ಒಂದು ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದಾಳೆ. ಅರು ಗೌಡ ಅಭಿನಯದ ನಿರ್ದೇಶಕ ಎ.ಆರ್. ಬಾಬು ಪುತ್ರ ಶಾನ್ ನಿರ್ದೇಶನದ `ಆರ್‍ಜಿವಿ’ ಸಿನಿಮಾದಲ್ಲಿ ಶುಭಾ ಪೂಂಜಾಳದ್ದು ಸ್ಪೆಷಲ್ ಡ್ಯಾನ್ಸ್. ಚಿತ್ರದಲ್ಲಿ ಶುಭಾಳೇ ನಟಿಸಬೇಕಿತ್ತಂತೆ. ಆದರೆ, ಡೇಟ್ ಸಮಸ್ಯೆಯಿಂದ ನಟಿಸಲು ಸಾಧ್ಯವಾಗಿಲ್ಲ. ಶುಭಾ ತಮ್ಮ ಚಿತ್ರದಲ್ಲಿ ಇರಲೇಬೇಕೆಂದು ಬಯಸಿದ್ದ ಶಾನ್, ಶುಭಾಗೋಸ್ಕರವೇ ಒಂದು ಹಾಡನ್ನು ಇಟ್ಟಿದ್ದಾರೆ. ನಿರ್ದೇಶಕರು ಒತ್ತಾಯಪಡಿಸಿದ್ದರಿಂದ ಶುಭಾ ಕೂಡಾ ಒಪ್ಪಿಕೊಂಡು ಹಾಡಿಗೆ ಕುಣಿದಿದ್ದಾಳೆ.
ಇತ್ತೀಚೆಗೆ ನೆಲಮಂಗಲ ಸಮೀಪದ ಡಾಬಾವೊಂದರಲ್ಲಿ ಆ ಐಟಂ ಸಾಂಗ್ ಚಿತ್ರೀಕರಣ ನಡೆದಿದೆ. ಗಂಡಸರಿಗೆ ಬುದ್ಧಿ ಹೇಳುವ ಹಾಡನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರಂತೆ. `ಆರ್‍ಜಿವಿ’ ಚಿತ್ರದ ವಿಶೇಷವೆಂದರೆ ಈ ಚಿತ್ರವನ್ನು ಆಟೋ ಡ್ರೈವರ್‍ಗಳೇ ಸೇರಿ ನಿರ್ಮಿಸಿರುವುದು. ಈ ಚಿತ್ರದಲ್ಲಿ ರಮೇಶ್ ಭಟ್, ಸುಧಾ ಬೆಳವಾಡಿ ಮುಂತಾದವರು ಪೋಷಕ ಪಾತ್ರವಹಿಸಿದ್ದಾರೆ.