ರಷ್ಯಾದ ಯುವಕನ ಜೊತೆ ಶ್ರಿಯಾ ಮದುವೆ ?

ಸೌತ್ ಸೈರನ್ ಶ್ರಿಯಾ ಸರನ್ ಈಗ ಕೆಲವು ವರ್ಷಗಳಿಂದ ರಷ್ಯಾದ ಯುವಕನೊಬ್ಬನ ಜೊತೆ ಡೇಟಿಂಗ್ ಮಾಡುತ್ತಿದ್ದು ಆತನ ಜೊತೆಗೆ ಮಾರ್ಚ್ ತಿಂಗಳಲ್ಲಿ ಮದುವೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದೆ. ಮೂಲವೊಂದರ ಪ್ರಕಾರ ರಾಜಸ್ಥಾನದಲ್ಲಿ ಅವರ ಡೆಸ್ಟಿನೇಶನ್ ವಿವಾಹ ನಡೆಯಲಿದೆÉ.

ತೆಲುಗು ಮತ್ತು ತಮಿಳಿನಲ್ಲಿ ಹೆಸರು ಗಳಿಸಿರುವ ಶ್ರಿಯಾ ಬಾಲಿವುಡ್ಡಿನಲ್ಲಿ ಅಜಯ್ ದೇವಗನ್ ಜೊತೆಗಿನ `ದೃಶ್ಯಂ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾಳೆ. ಈಕೆಯೀಗ ಮದುವೆ ಬಂಧನಕ್ಕೆ ಒಳಗಾಗಲು ರೆಡಿಯಾಗಿದ್ದು ತನ್ನ ಪ್ರಿಯಕರನ ಪಾಲಕರನ್ನು ಭೇಟಿಯಾಗಲು ರಷ್ಯಾಕ್ಕೆ ತೆರಳಿದ್ದಾಳೆ ಎನ್ನಲಾಗಿದೆ. ಆದರೆ ಶ್ರಿಯಾ ಮತ್ತು ಆಕೆಯ ತಾಯಿ ಈ ಸುದ್ದಿ ಬರೀ ರೂಮರ್ ಅಷ್ಟೇ ಎಂದಿದ್ದಾರೆ. ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ ಎನ್ನುತ್ತಾರೆ ಚಿತ್ರರಂಗದ ಮಂದಿ. ಯಾಕೆಂದರೆ ಈ ಮೊದಲು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆ ದಿನದವರೆಗೂ ಇದೆಲ್ಲ ಬರೀ ರೂಮರ್ ಅಷ್ಟೇ ಎಂದೇ ಹೇಳಿಕೊಂಡು ತಿರುಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

LEAVE A REPLY