ಶ್ರದ್ಧಾ ಶ್ರೀನಾಥಗೆ `ಶಾದಿ ಭಾಗ್ಯ’

ಶೀರ್ಷಿಕೆ ನೋಡಿ ಗೊಂದಲವಾಯಿತಾ…ಶ್ರದ್ಧಾ ಶ್ರೀನಾಥಗೆ `ಶಾದಿ ಭಾಗ್ಯ’ ಆಗುವುದು ತೆರೆಮೇಲೆ.

2016ರ ಸೂಪರ್ ಹಿಟ್ ತೆಲುಗು ಚಿತ್ರ `ಪೆಳ್ಳಿ ಚೂಪುಲು’ ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು ಆ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ.

ಚಿತ್ರದ ಕನ್ನಡ ಅವತರಣಿಕೆಗೆ `ಶಾದಿ ಭಾಗ್ಯ’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆಯಂತೆ. ಈ ಸಿನಿಮಾದಲ್ಲಿ `ಯು ಟರ್ನ್’ ಬೆಡಗಿ ಶ್ರದ್ಧಾ ಶ್ರೀನಾಥ್ ವಧು. `ಫಸ್ಟ್ ರ್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ವರ. ಈ ಚಿತ್ರವನ್ನ ನೃತ್ಯ ಸಂಯೋಜಕ ಮುರುಳಿ ಮಾಸ್ಟರ್ ನಿರ್ದೇಶನ ಮಾಡಲಿದ್ದಾರೆ.

ಈ ಸಿನಿಮಾವೊಂದು ಸ್ವಯಂವರದ ಕಾನ್ಸೆಪ್ಟ್ ಹೊಂದಿದ್ದು ರೊಮ್ಯಾಂಟಿಕ್ ಕಾಮಿಡಿ ಆಗಿದೆ.