ಟಾಲಿವುಡ್ಡಿನಿಂದಲೂ ಶ್ರದ್ಧಾಗೆ ಬುಲಾವ್

`ಯು-ಟರ್ನ್’ ಮತ್ತು `ಊರ್ವಿ’ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿ ಕನ್ನಡಿಗರ ಮನದಲ್ಲಿ ಜಾಗ ಪಡೆದಿರುವ ಶ್ರದ್ಧಾ ಶ್ರೀನಾಥಗೆ ಈಗ ಎಲ್ಲೆಡೆಯಿಂದಲೂ ಬೇಡಿಕೆ ಬರುತ್ತಿದೆ. ಬಣ್ಣದ ಲೋಕಕ್ಕೆ ಕಾಲಿಟ್ಟ ಸ್ವಲ್ಪ ಸಮಯದಲ್ಲಿಯೇ ಶ್ರದ್ಧಾ ದಕ್ಷಿಣದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬಳಾಗುತ್ತಿದ್ದಾಳೆ. ಕನ್ನಡದಲ್ಲಿ ಆಕೆ ಈಗ `ಆಪರೇಷನ್ ಅಲಮೇಲಮ್ಮ’ ಚಿತ್ರದಲ್ಲಿ ನಟಿಸುತ್ತಿದ್ದು ಜೊತೆಗೇ `ಶಾದಿ ಭಾಗ್ಯ’ಕ್ಕೂ ತಯಾರಾಗಿ ನಿಂತಿದ್ದಾಳೆ.

ಶ್ರದ್ಧಾಗೆ ಸ್ಯಾಂಡಲ್ವುಡ್ಡಿನಲ್ಲಿ ಮಾತ್ರ ಅಲ್ಲ, ಕಾಲಿವುಡ್ಡಿನಲ್ಲಿಯೂ ಆಕೆಗೆÉ ಬೇಡಿಕೆ ಹೆಚ್ಚಾಗಿದೆ. ತಮಿಳಿನ ಒಟ್ಟು ಮೂರು ಚಿತ್ರಗಳಲ್ಲಿ ಶ್ರದ್ಧಾ ನಟಿಸುತ್ತಿದ್ದಾಳೆ. ಈ ನಡುವೆ ಟಾಲಿವುಡ್ಡಿನಲ್ಲಿ ನಟಿಸಲೂ ಶ್ರದ್ಧಾಗೆ ಆಫರ್ ಬಂದಿದೆ. ಹೌದು, ಸದ್ಯದಲ್ಲಿಯೇ ಶ್ರದ್ಧಾ ತೆಲುಗು ಚಿತ್ರವೊಂದರಲ್ಲಿ ನಾಯಕಿ ಆಗಿ ನಟಿಸಲಿದ್ದಾಳೆಯಂತೆ. ಯಾವುದಮ್ಮಾ ಆ ಚಿತ್ರ ಅಂತ ಕೇಳಿದ್ರೆ ಎಲ್ಲವೂ ಕನ್ಫರ್ಮ್ ಆದ ಬಳಿಕ ತಿಳಿಸುವೆ ಎನ್ನುತ್ತಾಳೆ ಈ ಮೂಗುತಿ ಸುಂದರಿ.