ಮದುವೆಯಾಗಲು ಹೆಚ್ಚಿನವರು ಈಗ ಬಯಸುವುದಿಲ್ಲ : ಶ್ರದ್ಧಾ

“ಈಗಿನ ಯುವಜನಾಂಗದ ಹೆಚ್ಚಿನವರು ಕಮಿಟ್ ಆಗಲು ಬಯಸುವುದಿಲ್ಲ. ಪಾಲಕರು ಕೂಡಾ ಈ ಬಗ್ಗೆ ಒತ್ತಾಯಿಸುವುದಿಲ್ಲ. ಲವ್ ಮ್ಯಾರೇಜ್ ಅಥವಾ ಲಿವ್ ಇನ್ ರಿಲೇಶನ್ಶಿಪ್ ಇವನ್ನು ಪಾಲಕರೂ ಈಗ ಒಪ್ಪಿಕೊಂಡು ಬಿಟ್ಟಿದ್ದಾರೆ” ಎನ್ನುವುದು ಶ್ರದ್ಧಾ ಕಪೂರ್ ಅಭಿಮತ.

ಮೊನ್ನೆ `ಹಾಫ್ ಗರ್ಲ್‍ಫ್ರೆಂಡ್’ ಟ್ರೈಲರ್ ರಿಲೀಸ್ ಸಮಯದಲ್ಲಿ ಮಾತಾಡುತ್ತಾ ಶ್ರದ್ಧಾ `ಈಗಿನ ಕಾಲದಲ್ಲಿ ಯುವಕ ಯುವತಿಯರ ಸಂಬಂಧಕ್ಕೆ ಹೆಸರು ಕೊಡುವುದೇ ಕಷ್ಟ. ಕೆಲವೊಮ್ಮೆ ಒಬ್ಬ ಹುಡುಗಿ ಹುಡುಗನ ಜೊತೆ ಫ್ರೆಂಡಿಗಿಂತಲೂ ಜಾಸ್ತಿ ಆತ್ಮೀಯತೆ ಹೊಂದಿರುತ್ತಾಳೆ. ಹಾಗಂತ ಅವನನ್ನು ಬಾಯ್ ಫ್ರೆಂಡ್ ಎನ್ನಲೂ ಬರುವುದಿಲ್ಲ. ಅವರೆರಡರ ನಡುವಿನ ಸಂಬಂಧವೂ ಇರುತ್ತದೆ’ ಎನ್ನುತ್ತಾಳೆ ಶ್ರದ್ಧಾ. “ನನ್ನ ಫ್ರೆಂಡ್ಸ್ ಅನೇಕರು ಸಂಬಂಧದಲ್ಲಿ ಫುಲ್ ಕಮಿಟ್ ಆಗಲು ಬಯಸದವರಿದ್ದಾರೆ. ಮದುವೆಯಾಗಿ ಸೆಟ್ಲ್ ಆಗಬಯಸದವರೂ ಇದ್ದಾರೆ. ಈಗಿನ ಪಾಲಕರು ಲಿವ್ ಇನ್ ರಿಲೇಶನ್ಶಿಪ್ಪನ್ನೂ ಮಕ್ಕಳ ಸುಖಕ್ಕಾಗಿ ಒಪ್ಪಿಕೊಳ್ಳುತ್ತಾರೆ. ನಾನು ಇಂತಹ ವಿಷಯವನ್ನೆಲ್ಲ ನನ್ನ ಪಾಲಕರ ಜೊತೆ ಓಪನ್ನಾಗಿಯೇ ಮಾತಾಡುತ್ತೇನೆ” ಎಂದು ಬಿಂದಾಸಾಗಿಯೇ ಮಾತಾಡುತ್ತಾಳೆ ಶ್ರದ್ಧಾ.