ಹೈದರಾಬಾದ್ ಫುಡ್ಡಿಗೆ ಶ್ರದ್ಧಾ ಫಿದಾ

ಸದ್ಯ `ಸಾಹೋ’ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವ ಪ್ರಭಾಸ್ – ಶ್ರದ್ಧಾ ತಮ್ಮ ಕೆಮೆಸ್ಟ್ರಿ ಚಿತ್ರದಲ್ಲಿ ಚೆನ್ನಾಗಿ ಮೂಡಿಬರಬೇಕನ್ನುವ ಉದ್ದೇಶದಿಂದ ಆಗೀಗ ಕೆಲವು ಸಮಯ ಜೊತೆಯಾಗಿ ಕಳೆಯುತ್ತಿದ್ದಾರೆ. ಮೊನ್ನೆ ಪ್ರಭಾಸ್ ಶ್ರದ್ಧಾಗಾಗಿ ಔತಣ ಏರ್ಪಡಿಸಿದ್ದು ಇದರಲ್ಲಿ ಹೈದರಾಬಾದಿ ಥರಾವರಿ ಫುಡ್ ಮೆನುದಲ್ಲಿತ್ತಂತೆ. ಶ್ರದ್ಧಾ ಈ ಟೇಸ್ಟಿ ಆಹಾರವನ್ನು ಸಕತ್ ಇಷ್ಟಪಟ್ಟಿದ್ದಾಳೆ. ಅಷ್ಟೇ ಅಲ್ಲ, ತನ್ನ ಇನ್‍ಸ್ಟಾಗ್ರಾಮಿನಲ್ಲಿ ಈ ಬಗೆಬಗೆಯ ಫುಡ್ ಇರುವ ಫೊಟೋವನ್ನು ತನ್ನ ಅಭಿಮಾನಿಗಳಿಗಾಗಿ ಶೇರ್ ಮಾಡಿದ್ದಾಳೆ.

ಅಂದ ಹಾಗೆ ಶ್ರದ್ಧಾಗೆ ತೆಲುಗು ಗೊತ್ತಿಲ್ಲ. ಪ್ರಭಾಸ್‍ಗೆ ಹಿಂದಿ ಚೆನ್ನಾಗಿ ಗೊತ್ತಿಲ್ಲ. ಹಾಗಾಗಿ ಪ್ರಭಾಸನಿಗೆ ಶ್ರದ್ಧಾ ಹಿಂದಿ ಹೇಳಿಕೊಡುತ್ತಿದ್ದಾಳೆ. ಶ್ರದ್ಧಾಗೆ ಪ್ರಭಾಸ್ ತೆಲುಗು ಕಲಿಸುತ್ತಿದ್ದಾನೆ. ಅಂತೂ ಅವರಿಬ್ಬರೂ ಈಗ ಒಳ್ಳೆಯ ಸ್ನೇಹಿತರಾಗಿದ್ದಾರೆ.