ಕಾರವಾರ : ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಅಂಗಡಿಕಾರರಿಂದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಕಾರವಾರ : ನಗರದ ಮೀನು ಮಾರುಕಟ್ಟೆ ಆವರಣದಲ್ಲಿ ತೆರುವುಗೊಳಿಸಲಾದ ಮಟನ್ ಅಂಗಡಿಕಾರರಿಗೆ ವ್ಯಾಪಾರ ನಡೆಸಲು ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿ ವ್ಯಾಪಾರಸ್ಥರ ಸಂಘದ ಸದಸ್ಯರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಮಂಗಳವಾರ ಪ್ರತಿಭಟನೆ ನಡೆಸಿದರು.

ಬಂದ್ ನಡೆಸಲು ಜಿಲ್ಲಾಡಳಿತ ಮತ್ತು ಪೆÇಲೀಸ್ ಇಲಾಖೆ ಅನುಮತಿ ನಿರಾಕರಿಸಿದ್ದರಿಂದ ವ್ಯಾಪಾರಸ್ಥರು ನಗರಸಭೆ, ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಲಿಲ್ಲ. ಸಂಡೇ ಮಾರ್ಕೇಟ್ ರಸ್ತೆಯಲ್ಲಿ ಬೆಳಗ್ಗೆ ಮೌನವಾಗಿ ಶಾಂತಿಯುತವಾಗಿ ಧರಣಿ ಕುಳಿತು, ಪ್ರತಿಭಟನೆಯ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಸ್ಥಳೀಯ ನಗರಸಭೆ ಸದಸ್ಯರಾದ ಡಾ ನಿತೀನ್ ಪಿಕಳೆ ಹಾಗೂ ಗಣಪತಿ ಉಳ್ವೇಕರ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ ವ್ಯಾಪಾರಸ್ಥರು ನಗರಸಭೆ ಸದಸ್ಯರ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಅಲ್ಲದೇ ಮೊದಲ ಹಂತದ ಕಾಮಗಾರಿ ಆರಂಭವಾಗುವವರೆಗೆ ಸಂಡೇ ಮಾರ್ಕೇಟ್ ಕಟ್ಟಡವನ್ನು ತೆರುವುಗೊಳಿಸದಂತೆ, ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲು ನಗರಸಭೆ ಸದಸ್ಯರು ಮುಂದಾಗಬೇಕು ಎಂಬ ಬೇಡಿಕೆ ಇಟ್ಟರು. ಮುಂದಿನ ದಿನಗಳಲ್ಲಿ ಸ್ಥಳೀಯ ನಗರಸಭೆ ಸದಸ್ಯರ ಸಹಕಾರದಲ್ಲಿ ಮುಂದುವರಿಯಲು ನಿರ್ಣಯಿಸಲಾಯಿತು.

LEAVE A REPLY