ಶೂಟೌಟ್ ಆರೋಪಿ ಮುಂಬೈಯಲ್ಲಿ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಶೂಟೌಟ್ ಪ್ರಕರಣದಲ್ಲಿ ಶಾಮೀಲಾಗಿ ತಲೆಮರೆಸಿಕೊಂಡು ಮುಂಬೈನಲ್ಲಿದ್ದ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿ ಮಂಗಳೂರಿಗೆ ಕರೆತಂದಿದ್ದಾರೆ.

ನಗರದ ಬಿಜೈ ಆನೆಗುಂಡಿಯಲ್ಲಿ 2014ರಲ್ಲಿ ಭಾರತಿ ಬಿಲ್ಡರ್ಸ್ ಮಾಲಕರ ಮೇಲೆ ಮುಖೇಶ್ ಶಿವಾಜಿ ಕಾಂಬ್ಳಿ (28) ಎಂಬಾತ ಶೂಟೌಟ್ ನಡೆಸಿ ಬಂಧನಕ್ಕೊಳಗಾಗಿದ್ದ. ಬಳಿಕ ಜಾಮೀನಿನಲ್ಲಿ ಹೊರ ಬಂದಿದ್ದ ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು.

ಆತ ಮುಂಬೈನಲ್ಲಿ ಇರುವುದನ್ನು ಖಚಿತಪಡಿಸಿದ ಪೊಲೀಸರು ಮುಂಬÉೈಗೆ ತೆರಳಿ ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.