`ಯಡ್ಡಿ ಹೆಣ ಹೊರಲು ತಯಾರಾದ ಶೋಭಾ, ಸಿಂಹ, ಹೆಗಡೆ, ರವಿ’

ಮೈಸೂರು : “ಬಾಯಿಗೆ ಬಂದ ಹಾಗೆ ಮಾತನಾಡುವುದರಲ್ಲಿ ನಿಸ್ಸೀಮರಾಗಿರುವ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗಡೆ ಹಾಗೂ ಸಿ ಟಿ ರವಿ ಅವರಿಗೆ ಬಾಯಿಗೆ ಬೀಗ ಹಾಕಿಕೊಳ್ಳುವಂತೆ ಯಡ್ಯೂರಪ್ಪ ಎಚ್ಚರಿಕೆ ನೀಡಬೇಕು. ಇಲ್ಲದೇ ಹೋದರೆ ಈ ನಾಲ್ಕು  ಮಂದಿಯೇ ಯಡ್ಯೂರಪ್ಪ ಅವರ ಹೆಣ ಹೊರಲು ಸಿದ್ಧರಾಗುತ್ತಾರೆ” ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್ ಲೇವಡಿ ಮಾಡಿದ್ದಾರೆ.

ಭಾನುವಾರ ನಗರದಲ್ಲಿ ನಡೆದ ಸಿಪಿಐ 12ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ  ಪಾಟೀಲ್,  ಈ ನಾಲ್ಕು ಮಂದಿಯಲ್ಲಿ ಒಬ್ಬರು ಸಂವಿಧಾನದಲ್ಲಿ ಬದಲಾವಣೆ ಬಗ್ಗೆ ಮಾತನಾಡಿದರೆ ಇತರರು ಟಿಪ್ಪು ಜಯಂತಿಗೆ ವಿರೋಧದ ಬಗ್ಗೆ ಮಾತನಾಡುತ್ತಾರೆಯೇ ವಿನಹ ಸಾರ್ವಜನಿಕರ ಕಲ್ಯಾಣದ ಬಗ್ಗೆ ಒಂದೇ ಒಂದು ಮಾತನ್ನು ಆಡುತ್ತಿಲ್ಲ. ಈ ನಾಲ್ಕು ಮಂದಿಯೂ ಕಾರ್ಮಿಕರು ಹಾಗೂ ಕೃಷಿಕರ ಸಮಸ್ಯೆಗಳ ಬಗ್ಗೆ ಯಾವುದೇ ಮಾತನ್ನಾಡುವುದಿಲ್ಲ ಎಂದು ಹೇಳಿದ ಪಾಟೀಲ್ ಈ ನಾಯಕರು  ಆಡುವ ಮಾತುಗಳೇ ಅವರಿಗೊಂದು ದಿನ ಕಂಟಕವಾಗಲಿದೆ ಎಂದು ಭವಿಷ್ಯ ನುಡಿದರು.

LEAVE A REPLY