ಕತಾರಿನಲ್ಲಿ ಪ್ರಣೀತಾ ಜೊತೆ ಶಿವರಾಜ್ ಡ್ಯೂಯೆಟ್

ಅಂತೂ ಕೊನೆಗೂ ಶಿವರಾಜ್ ಕುಮಾರ್ ಚಿತ್ರ `ಲೀಡರ್’ ಇದ್ದಿದ್ದು ಈಗ `ಮಾಸ್ ಲೀಡರ್’ ಆಗಿ ಬದಲಾಗಿ ಟೈಟಲ್ ವಿಷಯದಲ್ಲಿ ಇದ್ದ ಗೊಂದಲಕ್ಕೆ ತೆರೆ ಬಿದ್ದಿದೆ.

ಸದ್ಯ ಚಿತ್ರತಂಡ ಕತಾರಿನಲ್ಲಿ ಬೀಡುಬಿಟ್ಟಿದ್ದು ಈ ಚಿತ್ರದ ರೊಮ್ಯಾಂಟಿಕ್ ಹಾಡೊಂದರ ಶೂಟಿಂಗ್ ಇತ್ತೀಚೆಗಷ್ಟೇ ನಡೆಯಿತು. ನಾಗೇಂದ್ರ ಪ್ರಸಾದ್ ಸಾಹಿತ್ಯ ಇರುವ ಈ ಹಾಡಿನಲ್ಲಿ ಚಿತ್ರದ ನಾಯಕಿ ಪ್ರಣೀತಾ ಜೊತೆ ಸಮುದ್ರ ತೀರದಲ್ಲಿ ಶಿವರಾಜ್ ಪ್ರೇಮಗೀತೆ ಹಾಡಿದ್ದಾನೆ. ಕತಾರ್ ದೇಶದ ಸುಂದರ ಸಮುದ್ರತೀರ, ಮರುಭೂಮಿ ಸೇರಿದಂತೆ ಮನಸೆಳೆಯುವ ಪ್ರಕೃತಿ ತಾಣದಲ್ಲಿ ಈ ಹಾಡು ಚಿತ್ರೀಕರಣಗೊಂಡಿದೆ.

ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮಗಳು ಪರಿಣಿತಾ ಶಿವರಾಜ್ ಮಗಳ ಪಾತ್ರದಲ್ಲಿ ನಟಿಸಿದ್ದಾಳೆ. ನರಸಿಂಹ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ವಿಜಯ ರಾಘವೇಂದ್ರ, ಲೂಸ್ ಮಾದ ಯೋಗಿ ಮತ್ತು ಜಗ್ಗೇಶ್ ಮೊದಲಾದವರೂ ತಾರಾಗಣದಲ್ಲಿದ್ದಾರೆ.