ಡಿಸಿಸಿ ಬ್ಯಾಂಕ್ ಅಧ್ಯಕ್ಷತೆಯಿಂದ ಅನರ್ಹಗೊಂಡ ಮುಂಜುನಾಥ ಗೌಡ

ನಕಲಿ ಚಿನ್ನದ ಮೇಲೆ ಸಾಲ

ಬೆಂಗಳೂರು :  ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಮತ್ತು ಇತರೆ ಆರು ಮಂದಿ ಆಡಳಿತ ಮಂಡಳಿ ಸದಸ್ಯರನ್ನು ರಾಜ್ಯ ಸರಕಾರವು ಅನರ್ಹಗೊಳಿಸಿದೆ.

ನಕಲಿ ಚಿನ್ನಾಭರಣಗಳ ಮೇಲೆ ಸಾಲಸೌಲಭ್ಯವನ್ನು ನೀಡಿದ ಹಗರಣದಲ್ಲಿ ಇವರೆಲ್ಲರೂ ಶಾಮೀಲಾಗಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. ಬ್ಯಾಂಕಿನ ಎಲ್ಲಾ ನಿಯಮ ನಿಬಂಧನೆಗಳನ್ನು ಮೀರಿ ಇವರು ಅವ್ಯವಹಾರ ಎಸಗಿದ್ದು, ಬ್ಯಾಂಕಿಗೆ 62 ಕೋಟಿ ರೂ ನಷ್ಟ ಉಂಟಾಗಿದೆ.

2004ರಿಂದ 2014ರ ನಡುವೆ ಬ್ಯಾಂಕಿನಿಂದ ಒಟ್ಟು 62 ಕೋಟಿ ರೂ ಚಿನ್ನಾಭರಣ ಸಾಲ ಸೌಲಭ್ಯವನ್ನು ನೀಡಲಾಗಿತ್ತು.  185 ಪ್ರಕರಣಗಳಲ್ಲಿ 17.13 ಕೋಟಿ ರೂ ಯಾವುದೇ ಸೊತ್ತುಗಳನ್ನು ಅಡಮಾನ ಇರಿಸದೇ ಸಾಲ ನೀಡಲಾಗಿದೆ.

2014ರಲ್ಲಿ ಈ ಹಗರಣ ಬೆಳಕಿಗೆ ಬಂದಿತ್ತು. ಬಳಿಕ ಇಲ್ಲಿಗೆ ನೇಮಕಗೊಂಡ ಬ್ಯಾಂಕಿನ ಜನರಲ್ ಮ್ಯಾನೇಜರ್ ಈ ಬಗ್ಗೆ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿದ ಬಳಿಕ ವಿಚಾರಣೆಯನ್ನು ನಡೆಸಿದ ಪೊಲೀಸರು ಬ್ಯಾಂಕಿನ ಅಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ 18 ಸಿಬ್ಬಂದಿಗಳನ್ನು ಬಂಧಿಸಿದ್ದರು.