ಗೋವಾ ಆರ್ಚ್ಬಿಷಪ್ ವಿರುದ್ಧ ಶಿವಸೇನೆ ದೂರು

ಆರ್ಚಬಿಷಪ್ ಫಿಲಿಪ್ ಫೆರಾರೋ

ಪಣಜಿ : ಚುನಾವಣಾ ಪ್ರಕ್ರಿಯೆಯಲ್ಲಿ `ಹಸ್ತಕ್ಷೇಪ’ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗೋವಾ ಮತ್ತು ದಮಾನ್ ಆರ್ಚ್ ಬಿಷಪ್ ಫಿಲಿಪ್ ನೇರಿ ಪೆರಾರೋ ವಿರುದ್ಧ ಡಿ 30ರಂದು ಶಿವಸೇನೆ ಭಾರತ ಚುನಾವಣಾ ಆಯೋಗಕ್ಕೆ ಅಧಿಕೃತ ದೂರು ನೀಡಲು ನಿರ್ಧರಿಸಿದೆ.

“ಚರ್ಚ್ ಧಾರ್ಮಿಕ ಸ್ಥಳ ಮತ್ತು ಆರ್ಚ್ ಬಿಷಪ್ ಅದರ ಮುಖ್ಯಸ್ಥರಾಗಿರುತ್ತಾರೆ. ತನ್ನ ಸಮುದಾಯದ ವಿಷಯದಲ್ಲಿ ಚರ್ಚಿಸಲು ರಾಜಕೀಯ ನಾಯಕರಿಗೆ ಅವರು ಆಹ್ವಾನಿನ ನೀಡುವಂತಿಲ್ಲ. ಫಿಲಿಪ್ ಧರ್ಮದ ದಾರಿ ತಪ್ಪಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಗೋವಾದಲ್ಲಿ ಸುದ್ದಿಗಾರರಲ್ಲಿ ಹೇಳಿದರು.

ಮುಂಬರುವ ಗೋವಾ ಚುನಾವಣೆಯಲ್ಲಿ ಚರ್ಚ್ ಮತದಾನಕ್ಕೆ ವಿಶ್ವಾಸಾರ್ಹ ಮಾರ್ಗದರ್ಶನ ನೀಡಬೇಕೆಂದು ಆರ್ಚ್‍ಬಿಷಪ್ ಇತ್ತೀಚೆಗೆ ಹೇಳಿಕೆ ನೀಡಿದ್ದರು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿತ್ತು.

ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ ಮತ್ತು ಸೀಎಂ ಲಕ್ಷ್ಮೀಕಾಂತ ಪರೇಸ್ಕರ್ ಉಪಸ್ಥಿತರಿದ್ದ ಸಮಾರಂಭವೊಂದರಲ್ಲಿ ಆರ್ಚ್‍ಬಿಷಪ್ ಈ ಕರೆ ನೀಡಿದ್ದರು.

ಆರ್ಚ್ ಬಿಷಪ್ ಎದುರು ಕುಳಿದ್ದವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ರಾವುತ್ ಹೇಳಿದರು.

“ಈ ವಿಷಯದಲ್ಲಿ ನಾವು ಭಾರತದ ಚುನಾವಣಾ ಆಯೋಗದಲ್ಲಿ ಅಧಿಕೃತ ದೂರು ನೀಡಲಿದ್ದೇವೆ” ಎಂದರು.