ಶಿರ್ಡಿ ಸಾಯಿಬಾಬಾ ಮಂದಿರಲ್ಲಿ 2.28 ಕೋ ರೂ ಹಳೆ ನೋಟು

ಶಿರ್ಡಿ : ಮಹಾರಾಷ್ಟ್ರದ ಪ್ರಸಿದ್ಧ ಯಾತ್ರಾ ಕ್ಷೇತ್ರ ಶಿರ್ಡಿ ಸಾಯಿಬಾಬಾ ದೇವಸ್ಥಾನವು ನೋಟು ನಿಷೇಧದ ಬಳಿಕ ಭಕ್ತಾದಿಗಳಿಂದ ನಿಷೇಧಿತ ನೋಟುಗಳಾದ 500 ಮತ್ತು 1,000 ರೂಪಾಯಿಯ 2.28 ಕೋಟಿ ರೂ ಸ್ವೀಕರಿಸಿದೆ ಎಂದು ದೇವಸ್ಥಾನದ ಆಡಳಿತ ಹೇಳಿದೆ.

ಆದಾಯ ತೆರಿಗೆ ಇಲಾಖೆ ಸೂಚನೆಯಂತೆ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನವಂಬರ್ 24ರ ಬಳಿಕ ಬ್ಯಾಂಕಿಗೆ ಈ ನೋಟುಗಳ ಠೇವಣಿ ಸ್ಥಗಿತಗೊಳಿಸಿದೆ.

ನವಂಬರ್ 8 ಮತ್ತು ನವಂಬರ್ 24ರ ಮಧ್ಯೆ ದೇವಸ್ಥಾನವು 500 ಮತ್ತು 1,000 ರೂವಿನ 1.57 ಕೋಟಿ ಹಳೆಯ ಕರೆನ್ಸಿ ನೋಟು ನಗದು ಪೆಟ್ಟಿಗೆಯ ಮೂಲಕ ಸ್ವೀರಿಸಿತ್ತು ಎಂದು ಟ್ರಸ್ಟಿನ ಕಾರ್ಯ ನಿರ್ವಹಾಧಿಕಾರಿ ಬಾಜೀರಾವ್ ಶಿಂದೆ ಹೇಳಿದರು.