ಶೆಟ್ಟಿ ಆರೋಪ ಕೇವಲ ಪ್ರಚಾರಕ್ಕೆ

ಎಂ ಎಸ್ ಮಹಮ್ಮದ್

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಎತ್ತಿನಹೊಳೆ ವಿಚಾರದಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿಯವರು ಸಚಿವ ರೈ ವಿರುದ್ಧ ಕೇವಲ ತನ್ನ ಪ್ರಚಾರಕ್ಕಾಗಿ ಆರೋಪ ಮಾಡಿದ್ದಾರೆಂದು ಕೆಪಿಸಿಸಿ ಸದಸ್ಯ, ದ ಕ ಜಿ ಪಂ ಸದಸ್ಯ ಎಂ ಎಸ್ ಮಹಮ್ಮದ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ ಎಸ್ ಮಹಮ್ಮದ್, “ಕಾಂಗ್ರೆಸ್ ಪಕ್ಷದಿಂದ ಎಲ್ಲವನ್ನೂ ಪಡೆದಿದ್ದ ಶೆಟ್ಟಿಯವರು ಇದೀಗ ಹತಾಶರಾಗಿ ಸಚಿವ ರೈ ವಿರುದ್ಧ ಅಸಂಬದ್ದ ಹೇಳಿಕೆ ನೀಡುತ್ತಿದ್ದಾರೆ. ರೈ ಜಾತಕ ತನ್ನಲ್ಲಿದೆ ಎಂದು ಶೆಟ್ಟಿ ಹೇಳಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನಿಜವಾಗಿಯೂ ಸಂತೋಷವಾಗಿದೆ. ಏಕೆಂದರೆ ಸಚ್ಚಾರಿತ್ರ್ಯ ಹಾಗೂ ಪ್ರಾಮಾಣಿಕತೆಯೇ ಸಚಿವ ರೈಯವರನ್ನು ಚುನಾವಣೆಯಲ್ಲಿ 6 ಬಾರಿ ಗೆಲ್ಲುವಂತೆ ಮಾಡಿದೆ ಹಾಗೂ ಮೂರು ಬಾರಿ ಕ್ಯಾಬಿನೆಟ್ ಸಚಿವರಾಗಿ, ಮೂವರು ಮುಖ್ಯಮಂತ್ರಿ ಅವಧಿಯಲ್ಲಿ ಜನಸೇವೆ ಮಾಡುವಂತೆ ಮಾಡಿದೆ” ಎಂದು ಎಂ ಎಸ್ ಹೇಳಿದರು.