ಉಡುಪಿಯಲ್ಲಿ ಮನೆಯಿಲ್ಲದವರಿಗೆ 2 ತಿಂಗಳಲ್ಲಿ ವಾಸ ವ್ಯವಸ್ಥೆ ಸಿದ್ಧ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮನೆರಹಿತ ನಗರ ನಿವಾಸಿಗಳಿಗೆ ಬೀಡಿನಗುಡ್ಡೆಯಲ್ಲಿ 11 ಸೆಂಟ್ಸ್ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಶ್ರಯ ಮನೆ ಇನ್ನೆರಡು ತಿಂಗಳೊಳಗೆ ಸಿದ್ಧಗೊಳ್ಳುವ ನಿರೀಕ್ಷೆಯಿದೆ.

ಕಟ್ಟಡಗಳು ಅಂದಾಜು ರೂ 40 ಲಕ್ಷ ವೆಚ್ಚದಲ್ಲಿ ರಾಷ್ಟ್ರೀಯ ನಗರ ಜೀವನಾಧಾರ ಮಿಷನ್ ಯೋಜನೆಯ ದೀನದಯಾಳ ಅಂತ್ಯೋದಯ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಕಟ್ಟಡವು ರಾತ್ರಿ ಹೊತ್ತಿನಲ್ಲಿ ಬಸ್ಸು ನಿಲ್ದಾಣಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ ಮತ್ತು ವ್ಯಾಪಾರ ಕಟ್ಟಡಗಳ ಎದುರುಗಡೆ ಇರುವ ಜಾಗದಲ್ಲಿ ಮಲಗಿ ದಿನಕಳೆಯುವ ನಿರಾಶ್ರಿತರಿಗೆ ಸಹಾಯವಾಗಲಿದೆ.

2014ರಲ್ಲಿ ಉಡುಪಿ ನಗರ ಪಾಲಿಕೆ ನಡೆಸಿದ ಸಮೀಕ್ಷೆಯ ಪ್ರಕಾರ ಸುಮಾರು 46 ಮಂದಿ ಬಸ್ಸು ನಿಲ್ದಾಣಗಳಲ್ಲಿ, ರೈಲ್ವೇ ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿ ಮಲಗಿ ನಿದ್ರಿಸುತ್ತಿರುವುದು ಪತ್ತೆಯಾಗಿತ್ತು. ಈ ಸಂಖ್ಯೆ 2015 ರಲ್ಲಿ 87ಕ್ಕೇರಿತ್ತು.

ಈ ಎರಡೂ ಸಮೀಕ್ಷೆಗಳು ರಾತ್ರಿ 11ರಿಂದ 2 ಗಂಟೆಯ ನಡುವೆ ನಡೆಸಲಾಗಿದೆ ಎಂದು ನಗರಪಾಲಿಕೆ ಸಮುದಾಯ ವ್ಯವಹಾರಗಳ ಅಧಿಕಾರಿ ಎಸ್ ಎಸ್ ನಾರಾಯಣ ಹೇಳಿದ್ದಾರೆ.

ಸಮೀಕ್ಷೆಯ ಪ್ರಕಾರ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಲಗಿ ನಿದ್ರಿಸುವ ಹೆಚ್ಚಿನ ಜನರು ವಲಸೆ ಕಾರ್ಮಿಕರು ಹಾಗೂ ನಾಲ್ಕೈದು ಮಂದಿ ಭಿಕ್ಷುಕರು. ಇದೇ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮಲಗಿರುವ ಪ್ರಕರಣ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಕಟ್ಟಡದಲ್ಲಿ 34 ಹಾಸಿಗೆ ಪುರುಷರಿಗೆ ಮತ್ತು 17 ಹಾಸಿಗೆ ಮಹಿಳೆಯರಿಗಿದೆ. ಅಗತ್ಯವಿದ್ದವರು ಅಡಿಗೆ ಮಾಡಿ ತಿನ್ನಲು ಅಡಿಗೆ ಕೋಣೆ ಮತ್ತು ಡೈನಿಂಗ್ ಹಾಲ್ ಕೂಡ ಇರುವುದು ಎಂದು ಎಸ್ ಎಸ್ ನಾರಯಣ ಹೇಳಿದ್ದಾರೆ.

LEAVE A REPLY